Menu

ರಾರಾಜಿಸಿದ ರಾಜಸ್ಥಾನ್; ಪಂಜಾಬ್ ಗೆ 50 ರನ್ ಆಘಾತ

jaiswal

ಮೊಹಾಲಿ: ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ 50 ರನ್ ಗಳ ಭಾರೀ ಅಂತರದಿಂದ ಐಪಿಎಲ್ ಟಿ-20 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದೆ.

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 205 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್ 43 ರನ್ ಗೆ 4 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಮುಗ್ಗರಿಸಿತು. ಈ ಹಂತದಲ್ಲಿ ನೆಹಲ್ ವಧೇರ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ 5ನೇ ವಿಕೆಟ್ ಗೆ 92 ರನ್ ಜೊತೆಯಾಟದಿಂದ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು.

ನೆಹಲ್ ವಧೇರ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 67 ರನ್ ಬಾರಿಸಿದರೆ, ಮ್ಯಾಕ್ಸ್ ವೆಲ್ 21 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 30 ರನ್ ಗಳಿಸಿದರು. ಇಬ್ಬರು ಒಬ್ಬರ ನಂತರ ಒಬ್ಬರಂತೆ ವಿಕೆಟ್ ಒಪ್ಪಿಸಿ ಹೊರ ನಡೆಯುತ್ತಿದ್ದಂತೆ ತಂಡದ ಸೋಲು ಖಚಿತವಾಯಿತು.

ರಾಜಸ್ಥಾನ್ ಪರ ಜೋಫ್ರಾ ಆರ್ಚರ್ 3, ಸಂದೀಪ್ ಶರ್ಮ ಮತ್ತು ಮಹೇಶ್ ತೀಕ್ಷಣ ತಲಾ 2 ವಿಕೆಟ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ 89 ರನ್ ಜೊತೆಯಾಟದಿಂದ ಉತ್ತಮ ಆರಂಭ ಪಡೆಯಿತು. ಜೈಸ್ವಾಲ್ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 67 ರನ್ ಸಿಡಿಸಿದರೆ, ಸ್ಯಾಮ್ಸನ್ 26 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 38 ರನ್ ಗಳಿಸಿದರು.

ಇವರಿಬ್ಬರ ನಿರ್ಗಮನದ ನಂತರ ರಿಯಾನ್ ಪರಾಗ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು ಸಿಕ್ಸರ್ ಸೇರಿದ 43 ರನ್ ಗಳಿಸಿದರೆ, ಶಿರ್ಮೊನ್ ಹೆಟ್ಮೆಯರ್ (20) ಮತ್ತು ಧ್ರುವ ಜುರೆಲ್ (13) ತಂಡವನ್ನು ಆಧರಿಸಿದರು.

Related Posts

Leave a Reply

Your email address will not be published. Required fields are marked *