Wednesday, August 13, 2025
Menu

ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ ಅವಧಿ ವಿಸ್ತರಣೆ

ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ, ರೈಲು ಸಂಖ್ಯೆ 07355/07356 ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಆದರೆ, ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂವರೆಗಷ್ಟೇ ಸಂಚರಿಸಲಿದೆ. ಈ ರೈಲು ಈಗಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಚಲಿಸುವುದನ್ನು ಮುಂದುವರಿಸುತ್ತದೆ.

ಈ ಹಿಂದೆ ಆಗಸ್ಟ್ 30, 2025 ರವರೆಗೆ ಓಡಲು ಸೂಚಿಸಲಾಗಿದ್ದ ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಈಗ ಸೆಪ್ಟೆಂಬರ್ 27, 2025 ರವರೆಗೆ ನಾಲ್ಕು ಟ್ರಿಪ್’ಗಳಿಗೆ ವಿಸ್ತರಿಸಲಾಗಿದೆ, ಆದರೆ, ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ಆಗಸ್ಟ್ 31, 2025 ರವರೆಗೆ ಸಂಚರಿಸಲು ಸೂಚಿಸಲಾಗಿದ್ದ, ರೈಲು ಸಂಖ್ಯೆ 07356 ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಈಗ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 28, 2025 ರವರೆಗೆ ನಾಲ್ಕು ಟ್ರಿಪ್’ಗಳಿಗೆ ಚಲಿಸಲಿದೆ, ಇದು ರಾಮೇಶ್ವರದ ಬದಲಿಗೆ ರಾಮನಾಥಪುರಂನಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ.

Related Posts

Leave a Reply

Your email address will not be published. Required fields are marked *