Wednesday, November 12, 2025
Menu

ಹುಬ್ಬಳ್ಳಿ ತ್ರಿಕೋನ ಪ್ರೇಮ ಜಗಳ: ನಿರಪರಾಧಿ ಯುವಕರಿಬ್ಬರಿಗೆ ಚಾಕು ಇರಿತ

ಹುಬ್ಬಳ್ಳಿಯ ಗ್ಲೋಬಲ್ ಕಾಲೇಜಿನ ಬಿಬಿಎ ಮೊದಲ ವರ್ಷದ ವಿದ್ಯಾರ್ಥಿಗಳಾದ ಮಣಿಕಂಠ ಮತ್ತು ಪವನ್ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದು, ಇದೇ ವಿಚಾರದಲ್ಲಿ ಅವರಿಬ್ಬರ ಮಧ್ಯೆ ನಡೆದ ಜಗಳದಲ್ಲಿ ನಿರಪರಾಧಿ ಯುವಕರಿಬ್ಬರು ಚಾಕು ಇರಿತಕ್ಕೆ ಒಳಗಾಗಿದ್ದಾರೆ.

ಅಭಿಷೇಕ್ ಬಂಡಿವಂಡರ್ (22) ಮತ್ತು ಮಾರುತಿ ಬಂಡಿವಂಡರ್ (20) ಚಾಕು ಇರಿತಕ್ಕೆ ಒಳಗಾದವರು. ಇವರಿಬ್ಬರು ಪವನ್‌ ಸ್ನೇಹಿತರು. ದೇಶಪಾಂಡೆ ನಗರದ ನಿವಾಸಿಗಳಾದ ಇಬ್ಬರು ಆಟೊ ಚಾಲಕರು ಸ್ನೇಹಿತ ಪವನ್ ಜೊತೆ ಪಾರ್ಟಿಗೆ ಹೋಗಿ ಜೀವ ಕಳೆದುಕೊಂಡಿದ್ದಾರೆ.

ಪ್ರಕರಣ ಸಂಬಂಧ ವಿದ್ಯಾನಗರ ಪೊಲೀಸರು ಮಣಿಕಂಠ (19) ಸೇರಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ಮಣಿಕಂಠ ಮತ್ತು ಪವನ್ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ತಿಂಗಳ ಹಿಂದೆಯೇ ಈ ವಿಚಾರಕ್ಕೆ ಜಗಳವಾಗಿತ್ತು. ನವೆಂಬರ್ 10ರ ರಾತ್ರಿ ಮಣಿಕಂಠ ತನ್ನ ಬರ್ತ್‌ಡೇ ಪಾರ್ಟಿಗೆ ಬಾ ಎಲ್ಲಾ ಸಮಸ್ಯೆಯನ್ನು ಮಾತುಕತೆಯಿಂದ ಬಗೆಹರಿಸೋಣ ಎಂದು ಪವನ್‌ನನ್ನು ಕರೆಸಿದ್ದ. ಪವನ್ ಆಟೋ ಚಾಲಕ ಸ್ನೇಹಿತರಾದ ಅಭಿಷೇಕ್ ಮತ್ತು ಮಾರುತಿಯನ್ನು ಕರೆದುಕೊಂಡು ಹೋಗಿದ್ದ.

ಪಾರ್ಟಿ ಆರಂಭವಾಗುತ್ತಿದ್ದಂತೆಯೇ ಜಗಳ ಶುರುವಾಗಿ ಮಣಿಕಂಠ ಮತ್ತು ಅವನ ಸ್ನೇಹಿತರು ಪವನ್ ಮೇಲೆ ಹಲ್ಲೆ ಮಾಡಿದರು. ಗಲಾಟೆಯಲ್ಲಿ , ಪ್ರೀತಿಯಲ್ಲಿ ಭಾಗಿಯಾಗದ ಅಭಿಷೇಕ್ ಮತ್ತು ಮಾರುತಿ ಚಾಕು ಇರಿತಕ್ಕೆ ಒಳಗಾದರು. ಸ್ಥಳೀಯರು ಬಂದಾಗ ಆರೋಪಿಗಳು ಪರಾರಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಆಯುಕ್ತರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಆರೋಪಿಗಳನ್ನುಬಂಧಿಸುವುದಾಗಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *