ಸೂಪರ್ ಹಿಟ್ ಸರಣಿ ಚಿತ್ರವಾದ ಕ್ರಿಷ್-4 ಚಿತ್ರವನ್ನು ನಾಯಕ ಹೃತಿಕ್ ರೋಷನ್ ನಿರ್ದೇಶಿಸಲಿದ್ದಾರೆ ಎಂದು ತಂದೆ ಹಾಗೂ ಹಿರಿಯ ನಿರ್ದೇಶಕ ರಾಕೇಶ್ ರೋಷನ್ ಘೋಷಿಸಿದ್ದಾರೆ.
ಕ್ರಿಷ್-4 ಚಿತ್ರಕ್ಕೆ ರಾಕೇಶ್ ರೋಷನ್ ಮತ್ತು ಯಶ್ ರಾಜ್ ಪರಸ್ಪರ ಕೈ ಜೋಡಿಸಿದ್ದಾರೆ. ಇದಕ್ಕೂ ಮೊದಲು ರಾಕೇಶ್ ರೋಷನ್ ನಿರ್ದೇಶಿಸಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದರು. ಇದೀಗ ನಿರ್ದೇಶನದಿಂದ ಹಿಂದೆ ಸರಿದಿದ್ದೂ ಅಲ್ಲದೇ ನಿರ್ಮಾಣವನ್ನು ಕೂಡ ಪಾಲುದಾರಿಕೆಯಲ್ಲಿ ಮಾಡುತ್ತಿದ್ದಾರೆ.
ನಿರ್ದೇಶನದಿಂದ ಹಿಂದೆ ಸರಿಯುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದ ರಾಕೇಶ್ ರೋಷನ್, ಇದೀಗ ನಾನು ಅತ್ಯಂತ ಜನಪ್ರಿಯವಾಗಿರುವ ಕ್ರಿಷ್-4 ಸರಣಿ ಚಿತ್ರದ ನಿರ್ದೇಶನವನ್ನು ಮಗನನ್ನು ಬಿಟ್ಟು ಮತ್ತಾರ ಮೇಲೂ ನಂಬಿಕೆ ಹೊಂದಿಲ್ಲ. ಆದ್ದರಿಂದ ನನ್ನ ಕಥೆ-ಚಿತ್ರಕಥೆಗೆ ಹೃತಿಕ್ ರೋಷನ್ ನಿರ್ದೇಶಿಸಲಿದ್ದಾರೆ. ಈ ಮೂಲಕ ಚೊಚ್ಚಲ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಶುಕ್ರವಾರ ಎಕ್ಸ್ ಖಾತೆಯಲ್ಲಿ ಈ ವಿಷಯ ಪ್ರಕಟಿಸಿರುವ ರಾಕೇಶ್ ರೋಷನ್, ನನ್ನ ಮಗನನ್ನು 25 ವರ್ಷಗಳ ಹಿಂದೆ ನಾಯಕನನ್ನಾಗಿ ಪರಿಚಯಿಸಿದ್ದೆ. ಈಗ ನಿರ್ದೇಶಕನಾಗಿ ಪರಿಚಯಿಸುತ್ತಿದ್ದೇನೆ. ಡುಗ್ಗು (ಹೃತಿಕ್) ನನ್ನ ಮುಂದಿನ ಜವಾಬ್ದಾರಿಯನ್ನು ವರ್ಗಾಯಿಸುತ್ತಿದ್ದೇನೆ. ನಾನು ಮತ್ತು ಆದಿತ್ಯ ಚೋಪ್ರಾ ನಿರ್ಮಿಸುತ್ತಿದ್ದು, ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.