ಟೆಕ್ಸಾಸ್‌ನಲ್ಲಿ ಹಿಂದೂ ಕುಟುಂಬವೊಂದು ಗೃಹ ಪ್ರವೇಶದ ವೇಳೆ ಹೋಮ ಮಾಡಿದ್ದು, ಇದರಿಂದ ಬಂದ ಹೊಗೆಯನ್ನು ಬೆಂಕಿ ಅವಘಢ ಎಂದು ತಪ್ಪಾಗಿ ಭಾವಿಸಿದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿತ್ತು.
ಗೃಹ ಪ್ರವೇಶ ಹೊಂದಿಂದ ಆವರಿಸಿದ ಹೊಗೆಯಿಂದಾಗಿ ನೆರೆಹೊರೆಯವರಲ್ಲಿ ಗೊಂದಲವುಂಟಾಗಿದೆ. ಬೆಂಕಿ ಅವಘಢ ಸಂಭವಿಸಿದೆ ಎಂದು ತಪ್ಪಾಗಿ ಭಾವಿಸಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದಿದ್ದು, ಅಲ್ಲಿ ಏನು ನಡೆಯುತ್ತಿದೆ ಎಂದು ಆಶ್ಚರ್ಯದಿಂದ ನೋಡುತ್ತಾ ನಿಂತಿದ್ದರು. ಅಗ್ನಿಶಾಮಕ ದಳದ ಅಧಿಕಾರಿಗಳು ತಮ್ಮ ಮನೆಯನ್ನು ಸುತ್ತುವರೆದಿರುವ ವೀಡಿಯೊವನ್ನು ಟೆಕ್ಸಾಸ್‌ನ ಈ ಹಿಂದೂ ಕುಟುಂಬ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಬೆಂಕಿ ಅನಾಹುತ ಸಂಭವಿಸಿಲ್ಲ. ನಾವು ಹಿಂದೂ ಸಂಪ್ರದಾಯದಂತೆ ಹೋಮ ಮಾಡುತ್ತಿರುವುದಾಗಿ ಎಂದು ಅಗ್ನಿಶಾಮಕ ಅಧಿಕಾರಿಗಳಿಗೆ ತಿಳಿಸುವಲ್ಲಿ ಸಾಕು ಸಾಕಾಯ್ತು ಎಂದು ಹೇಳಿದೆ.
ಘಟನೆಗೆ ಸಂಬಂಧಿಸಿದಂತೆ ಕೆನಡಾದ ಹಿಂದೂ ಗುಂಪೊಂದು, ಪೊಲೀಸ್ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ಸಾಂಸ್ಕೃತಿಕ ಸೂಕ್ಷ್ಮತೆಯ ತರಬೇತಿ ನೀಡುವಂತೆ ಸಲಹೆ ನೀಡಿದೆ. ಭಾರತೀಯ ಮೂಲದ ಸಾಮಾಜಿಕ ಬಳಕೆದಾರರೊಬ್ಬರು,”ನಾನು ವಾಸಿಸಿದ ಪ್ರತಿಯೊಂದೂ ಮನೆ ಮತ್ತು ಖರೀದಿಸಿದ ಪ್ರತಿಯೊಂದೂ ಹೊಸ ಕಾರಿಗೂ ಪೂಜೆ ಮಾಡಿದ್ದೇನೆ. ಇದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ ಎಂದು ಹೇಳಿದ್ದಾರೆ.
ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೇ ಚರ್ಚೆಗೆ ಕಾರಣವಾಗಿದೆ. ಈ ಕುಟುಂಬ ಗೃಹ ಪ್ರವೇಶದ ಪೂಜೆಗೆ ಸ್ಥಳೀಯ ನಿಯಮಗಳ ಪ್ರಕಾರ ಪೂರ್ವಾನುಮತಿ ಪಡೆದುಕೊಂಡಿತ್ತೇ ಅಥವಾ ಅಗ್ನಿಶಾಮಕ ಅಧಿಕಾರಿಗಳು ಈ ಕುಟುಂಬದ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದಾರೆಯೇ ಎಂಬುದು ಇದುವರೆಗೂ ಗೊತ್ತಾಗಿಲ್ಲ.