ಬೆಂಗಳೂರಿನ ಸಂಪಂಗಿ ರಾಮನಗರ ಪೊಲೀಸರು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, 40 ಲಕ್ಷ ಮೌಲ್ಯದ 384 ಗ್ರಾಂ ಚಿನ್ನಾಭರಣ ,107 ಗ್ರಾಂ ಬೆಳ್ಳಿ ,ಒಂದು ಕಾರು,2 ಬೈಕ್ ವಶಕ್ಕೆ ಪಡೆದಿದ್ದಾರೆ.
ಅಶೋಕ್ ಅಲಿಯಾಸ್ ಆ್ಯಪಲ್ ,ರೇಣುಕಾ ಪ್ರಸಾದ್ ಬಂಧಿತ ಆರೋಪಿಗಳು. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಅಶೋಕ್ ಬೈಕ್ ಕಳ್ಳತನ ಮಾಡಿ ಓಡಾಡುತ್ತಿದ್ದ. ಸಂಪಂಗಿನಗರ ಠಾಣಾ ವ್ಯಾಪ್ತಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದಾಗ ಸಂಪಂಗಿ ರಾಮನಗರ ಠಾಣೆ ಕಾನ್ಸ್ ಟೇಬಲ್ ಗಳು ಅನುಮಾನ ಬಂದು ಬೈಕ್ ತಪಾಸಣೆ ಮಾಡಿದ್ದಾರೆ. ಈ ವೇಳೆ ಬೈಕ್ ಡಿಕ್ಕಿಯಲ್ಲಿ ರಾಡ್ ಪತ್ತೆಯಾಗಿದೆ, ಪೊಲೀಸರು ದಾಖಲೆ ಕೇಳಿದಾಗ ಚಡಪಡಿಸಿದ್ದ ಆರೋಪಿ ಅಶೋಕ್ ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಮನೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಬ್ಯಾಡರಹಳ್ಳಿ, ಸಂಪಂಗಿ ರಾಮನಗರ ಸೇರಿದಂತೆ ಹಲವು ಠಾಣೆಗಳಲ್ಲಿ 10 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
ಚೆನ್ನಮ್ಮನಕೆರೆ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ರಫೀಕ್ ಸೇಟಿ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ 10.80 ಲಕ್ಷ ಮೌಲ್ಯ 120 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದ.