Thursday, January 30, 2025
Menu

ಪೀಣ್ಯ ಮೂವರು ಮಹಿಳೆಯರ ಕೊಲೆ ಪ್ರಕರಣದ ಭಯಾನಕ ಟ್ವಿಸ್ಟ್ ಇದು

ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದ ಆರೋಪಿ ಗಂಗರಾಜು ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಮಾಹಿತಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.

ಗಂಗರಾಜು ಕೊಲೆ ಮಾಡಿದ್ದು ಪತ್ನಿಯನ್ನಲ್ಲ, ಬೇರೆ ಮಹಿಳೆಯರನ್ನು ಎಂಬುದು ಬಯಲಾಗಿದೆ. ಗಂಗರಾಜು ಜೊತೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆ, ಆಕೆಯ ಮಗಳು, ಆಕೆಯ ಅಕ್ಕನ ಮಗಳು ಹೇಮಾವತಿ ಗಂಗರಾಜುವಿನಿಮದ ಕೊಲೆಯಾದವರು.

ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ಭಾಗ್ಯಮ್ಮ ಮತ್ತು ಗಂಗರಾಜು ಲಿವಿಂಗ್ ಇನ್ ರಿಲೇಷನಲ್ಲಿದ್ದರು. ಇತ್ತೀಚೆಗೆ ಭಾಗ್ಯಮ್ಮ ಮತ್ತು ಆಕೆಯ ಮಗಳಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನ ಪಟ್ಟಿದ್ದ. ಇತ್ತೀಚೆಗೆ ಮನೆಗೆ ಬಂದಿದ್ದ ಭಾಗ್ಯಮ್ಮನ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ. ಗಲಾಟೆ ಬಳಿಕ‌ ಹೆಸರಘಟ್ಟ ರೈತರ ಸಂತೆಯಲ್ಲಿ 500 ರೂಪಾಯಿ ಕೊಟ್ಟು ಮಚ್ಚು ತಂದು ಅವರನ್ನು ಕೊಲೆ ಮಾಡಿ ಪೊಲೀಸ್‍ಗೆ ಶರಣಾಗಿದ್ದ. ನೇರವಾಗಿ ಮನೆಗೆ ತಂದಿದ್ದ. ಬಳಿಕ ಮೂವರನ್ನು ಕೊಲೆ ಮಾಡಿ ಶರಣಾಗತಿಗೆ ಪ್ಲಾನ್ ಕೂಡಾ ಮಾಡಿಕೊಂಡಿದ್ದ.

ಭಾಗ್ಯಮ್ಮ ಮನೆಯಲ್ಲಿ ಇಲ್ಲದ ವೇಳೆ ಆರೋಪಿ ಸಂತೆಯಿಂದ ಮನೆಗೆ ಬರುತ್ತ ತೆಗೆದು ಮೊದಲು ಭಾಗ್ಯಮ್ಮನ ಮಗಳಾದ ನವ್ಯಾಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಬಳಿಕ ಅಡ್ಡ ಬಂದಿದ್ದ ಹೇಮಾವತಿಯ ಮೇಲೂ ಹಲ್ಲೆ ಮಾಡಿ ರುಂಡ ಮುಂಡ ಬೇರ್ಪಡಿಸಿ ಬಿಸಾಡಿದ್ದಾನೆ. ನಂತರ ಭಾಗ್ಯಮ್ಮನಿಗಾಗಿ ಬಾಗಿಲ ಹಿಂದೆ ಆರೋಪಿ ಗಂಗರಾಜು ಹೊಂಚು ಹಾಕಿ ಕುಳಿತಿದ್ದ, ಭಾಗ್ಯಮ್ಮ ಮನೆಗೆ ಬಂದು ರಕ್ತದ ಮಡುವಿನಲ್ಲಿದ್ದ ಮಗಳ ನೋಡಿ ಕಿರುಚಾಡಿದ್ದಾಳೆ. ಅಷ್ಟರಲ್ಲಿ ಆಕೆಯ ಮೇಲೂ ಮಚ್ಚು ಬೀಸಿ ಹತ್ಯೆ ಮಾಡಿದ್ದಾನೆ.

ಆರೋಪಿಯು ಆರು ವರ್ಷಗಳಿಂದ ಭಾಗ್ಯಮ್ಮಳ ಜೊತೆಗೆ ಇದ್ದು, ಆಕೆಯ ಮೇಲಿನ ಅನುಮಾನದಿಂದಲೇ ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *