Saturday, December 06, 2025
Menu

ಹೋಪ್- ಗ್ರೀವ್ ದಾಖಲೆ ಜೊತೆಯಾಟ: ಕಿವೀಸ್ ವಿರುದ್ಧ ವಿಂಡೀಸ್ ರೋಚಕ ಡ್ರಾ

shai hope

ಕಣ್ಣಿನ ಸೋಂಕಿನಿಂದ ನೋವಿನ ನಡುವೆಯೂ ಕೂಲಿಂಗ್ ಗ್ಲಾಸ್ ಧರಿಸಿ ಆಡಿದ ಶಾಯಿ ಹೋಪ್ ಮತ್ತು ಜಸ್ಟಿನ್ ಗ್ರೀವ್ಸ್ ಅವರ ಅಮೋಘ ಜೊತೆಯಾಟದಿಂದ ವೆಸ್ಟ್ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಡ್ರಾ ಸಾಧಿಸಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 531 ರನ್ ಗಳ ಕಠಿಣ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ ನಾಲ್ಕನೇ ದಿನದಾಟವಾದ ಶುಕ್ರವಾರ ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ ನಲ್ಲಿ ಅಲ್ಪ ಮೊತ್ತಕ್ಕೆ 4 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ ಸುಮಾರು ಎರಡು ದಿನಗಳ ಬ್ಯಾಟ್ ಮಾಡಿದ ಹೋಪ್ ಮತ್ತು ಗ್ರೀವ್ಸ್ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ. ಪಂದ್ಯದ ಅಂತಿಮವಾದ ದಿನವಾದ ಶನಿವಾರ ವೆಸ್ಟ್ ಇಂಡೀಸ್ 6 ವಿಕೆಟ್ ಕಳೆದುಕೊಂಡು 457 ರನ್ ಪೇರಿಸಿ ಪಂದ್ಯ ರೋಚಕ ಡ್ರಾ ಮಾಡಿಕೊಂಡಿತು.

72 ರನ್ ಗೆ 4 ವಿಕೆಟ್ ಕಳೆದುಕೊಂಡು ಸೋಲಿನ ತಂಡ ಸೋಲಿನ ದವಡೆಗೆ ಸಿಲುಕಿದ್ದಾಗ ಕಣ್ಣಿನ ಸೋಂಕಿಗೆ ಗುರಿಯಾಗಿದ್ದ ಶಾಯಿ ಹೋಪ್ ನಡುವೆಯೂ ಅಖಾಡಕ್ಕೆ ಇಳಿದ ಶಾಯಿ ಹೋಪ್ ಶತಕ ಬಾರಿಸಿದರೆ, ನಂತರ ಬಂದ ಜಸ್ಟೀನ್ ಗ್ರೀವ್ ದ್ವಿಶತಕದ ಗಳಿಸಿದರು.

ಶಾಯಿ ಹೋಪ್ 234 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ ಒಳಗೊಂಡ 140 ರನ್ ಗಳಿಸಿದರೆ  ಜಸ್ಟಿನ್ ಗ್ರೀವ್ 388 ಎಸೆತಗಳಲ್ಲಿ 19 ಬೌಂಡರಿ ಸಹಾಯದಿಂದ 202 ರನ್ ಗಳಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್ ಗೆ 204 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿದದರು.

ಹೋಪ್ ಔಟಾದ ನಂತರ ಗ್ರೀವ್ಸ್ ಮತ್ತು ಕೆಮರ್ ರೋಚ್ (ಅಜೇಯ 58) 7ನೇ ವಿಕೆಟ್ ಗೆ 180 ರನ್ ಜೊತೆಯಾಟ ನಿಭಾಯಿಸಿ ವಿಕೆಟ್ ಕಾಯ್ದುಕೊಂಡರು.

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 231 ಮತ್ತು ಎರಡನೇ ಇನಿಂಗ್ಸ್ ನಲ್ಲಿ 8 ವಿಕೆಟ್ ಗೆ 466 ರನ್ ಗೆ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನಿಂಗ್ಸ್ ನಲ್ಲಿ 167 ರನ್ ಗೆ ಆಲೌಟಾಗಿದ್ದ ವೆಸ್ಟ್ ಇಂಡೀಸ್ ಗೆಲ್ಲಲು 531 ರನ್ ಗಳ ಕಠಿಣ ಗುರಿ ಪಡೆದಿತ್ತು.

Related Posts

Leave a Reply

Your email address will not be published. Required fields are marked *