ಮೈಸೂರು: ಇಲ್ಲಿನ ಕೇಂದ್ರ ರೈಲು ನಿಲ್ದಾಣಕ್ಕೆ ಭಾನುವಾರ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಕರೆ ಬಂತು ಆತಂಕ ಸೃಷ್ಟಿಸಿತ್ತು.
ಆರ್‌ಪಿಎಫ್ ಹಾಗೂ ಬಾಂಬ್ ನಿಷ್ಕಿçಯ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಿದ ಬಳಿಕ ಹುಸಿ ಬಾಂಬ್ ಕರೆ ಎಂದು ಖಚಿತವಾಗಿ ಆತಂಕ ನಿವಾರಣೆಯಾಯಿತು.
ಭಾನುವಾರ ಬೆಳಗ್ಗೆ ಮೈಸೂರಿನ ರೈಲ್ವೆ ಪೊಲೀಸ್ ಠಾಣೆಗೆ ಅನಾಮದೇಯ ಕರೆ ಬಂದಿದ್ದು, ವ್ಯಕ್ತಿಯೊಬ್ಬ ಮೈಸೂರು ರೈಲ್ವೆ ನಿಲ್ದಾಣ ಬಾಂಬ್ ಇಡಲಾಗಿದೆ ಬೆದರಿಕೆ ಹಾಕಿದ್ದ. ಬಾಂಬ್ ಬೆದರಿಕೆ ಕರೆ ಸ್ವೀಕರಿಸಿದ ಸಿಬ್ಬಂದಿ ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತಂದರು.
ಕೂಡಲೇ ತಪಾಸಣಾ ಕಾರ್ಯಕ್ಕೆ ಮುಂದಾದ ಆರ್‌ಪಿಎಫ್ ತಂಡ ರೈಲ್ವೆ ನಿಲ್ದಾಣವನ್ನೇ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಲಾಡಿತು.
ನಿಲ್ದಾಣದಲ್ಲಿರುವ ಪ್ರತಿಯೊಂದು ಪ್ಲಾಟ್ ಫಾರಂ, ಮಳಿಗೆ, ಪ್ರಯಾಣಿಕರ ವಿಶ್ರಾಂತಿ ಗೃಹ, ಕಚೇರಿ ಕೊಠಡಿ ಸೇರಿದಂತೆ ರೈಲ್ವೆ ನಿಲ್ದಾಣವನ್ನು ಪರಿಶೀಲಿಸಿದ ಬಳಿಕ ನಿಲ್ದಾಣದಲ್ಲಿದ್ದ ರೈಲುಗಳ ಬೋಗಿಗಳನ್ನು ಪರಿಶೀಲಿಸಲಾಯಿತು.
ಮೆಟಲ್ ಡಿಟೆಕ್ಟರ್ ದಾಟಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಪ್ರತಿಯೊಬ್ಬ ಪ್ರಯಾಣಿಕರ ಬ್ಯಾಗ್, ಸೂಟ್‌ಕೇಸ್ ಸೇರಿ ತಂದಿದ್ದ ಲಗೇಜ್ ಪರಿಶೀಲಿಸಲಾಯಿತು. ಅಲ್ಲದೆ, ವಿವಿಧ ಪಾರ್ಸೆಲ್ ರೂಪದಲ್ಲಿ ಸಾಗಿಸಲು ತರಲಾಗಿದ್ದ ವಿವಿಧ ವಸ್ತುಗಳಿದ್ದ ಲಗೇಜ್ ರೂಮ್ ಪರಿಶೀಲಿಸಲಾಯಿತು.
ಬಾಂಬ್ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಪೊಲೀಸರು ಸತತವಾಗಿ ಎರಡು ಗಂಟೆಗೂ ಹೆಚ್ಚು ಕಾಲ ರೈಲ್ವೆ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಿದ ಬಳಿಕ ಬಾಂಬ್ ಬೆದರಿಕೆ ಕರೆ ಹುಸಿ ಕರೆ ಎಂದೇ ನಿರ್ಧರಿಸಲಾಯಿತು.