ಮುಂಗಾರು ಮಳೆಯ ಆರ್ಭಟಕ್ಕೆ ಹಿಮಾಚಲ ಪ್ರದೇಶದಲ್ಲಿ ಕಳೆದ ಒಂದು ತಿಂಗಳಲ್ಲಿ 109 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿದೆ.
2025 ಜೂನ್ 20ರಿಂದ ಜುಲೈ 16ರ ನಡುವೆ ಸಂಭವಿಸಿದ ಮಳೆ ದುರಂತದಲ್ಲಿ 109 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 64 ಮಂದಿ ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ ಅಸುನೀಗಿದ್ದರೆ, 45 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಭಾರೀ ಮಳೆಯಿಂದ ಭೂಕುಸಿತ, ಪ್ರವಾಹದ ಭೀತಿ ಮುಂತಾದ ಕಾರಣಗಳಿಗಾಗಿ 226 ರಸ್ತೆ ಮಾರ್ಗ ಬಂದ್ ಮಾಡಲಾಗಿದೆ. ಇದರಲ್ಲಿ ಉತ್ತರಾಯಿಯ 707 ರಾಷ್ಟ್ರೀಯ ಹೆದ್ದಾರಿ ಕೂಡ ಸೇರಿದೆ ಎಂದು ತಿಳಿಸಿದೆ.
52 ಪರಿಹಾರ ಪೂರೈಕೆ ಕೇಂದ್ರಗಳಿಗೆ ಹಾನಿಯಾಗಿದ್ದು, 137 ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಧಕ್ಕೆ ಆಗಿದೆ. ಮೇಘಸ್ಫೋಟ, ಪ್ರವಾಹ, ಭಾರೀ ಮಳೆ, ಮಳೆಯಿಂದ ಜಾರಿ ಬಿದ್ದಿರುವುದು, ಹಾವು ಕಡಿತ, ಕರೆಂಟ್ ಶಾಕ್ ಸೇರಿದಂತೆ ನಾನಾ ಕಾರಣಗಳಿಂದ ಮಳೆಯಿಂದ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮಂಡಿ ಹಾಗೂ ಕಾರಾಗದಲ್ಲಿ ತಲಾ 16 ಮಂದಿ ಮಳೆಗೆ ಬಲಿಯಾಗಿದ್ದರೆ, ಹಮಿಪುರ್ ನಲ್ಲಿ 8, ಕುಲುನಲ್ಲಿ 4 ಮತ್ತು ಚಾಂಬಾದಲ್ಲಿ ಮೂವರು ಮೃತಪಟ್ಟಿದ್ದಾರೆ.