ಬೋಸ್ಟನ್: ಅಮೆರಿಕದ ಬೋಸ್ಟನ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮೇಲೆ ನಡೆಸಿರುವ ದಾಳಿಯಲ್ಲಿ ಭಾರತ ಮೂಲದ ಉದ್ಯಮಿ ಅನುರಾಗ್ ಬಾಜಪೇಯಿ ಸಿಕ್ಕಿಬಿದ್ದಿದ್ದಾರೆ.
ಭಾರತದಲ್ಲಿ ಪರಿಶುದ್ಧ ಮಿನರಲ್ ವಾಟರ್ ಕಂಪನಿ ಗ್ರೇಡಿಯೆಂಟ್ ಕಂಪನಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ (ಸಿಇಒ)ಯಾಗಿದ್ದಾರೆ.
ದಂಧೆಯ ಸಂಬಂಧ ನ್ಯಾಯಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಡಜನ್ ಗಟ್ಟಲೆ ಹೆಸರುಗಳಿವೆ. ಅವರಲ್ಲಿ ವೈದ್ಯರು, ಲಾಯರ್ ಗಳು, ಸರಕಾರಿ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನೇಕರು ಇರುವುದನ್ನು ಉಲ್ಲೇಖಿಸಲಾಗದೆ.
ಅವರಲ್ಲಿ ಅನುರಾಗ್ ಬಾಜಪೇಯಿ ಕೂಡ ಒಬ್ಬರು ಎಂದು ಹೇಳಲಾಗಿದೆ. ದಾಳಿ ನಡೆದ ಸಂದರ್ಭದಲ್ಲಿ ಅನುರಾಗ್ ಬಾಜಪೇಯಿ ಅವರು, ಏಷ್ಯಾದ ಮಹಿಳೆಯೊಂದಿಗೆ ಆಪ್ತ ಸಮಯ ಕಳೆಯಲು 600 ಡಾಲರ್ ಪಾವತಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಇಂಥ ಹಲವಾರು ವೇಶ್ಯಾವಾಟಿಕೆ ಅಡ್ಡೆಗಲ ಮೇಲೆ ಪೊಲೀಸರು ನಡೆಸಿದ್ದು ಅಲ್ಲಲ್ಲಿ ಭಾರತೀಯರು ಸಿಕ್ಕಿಬಿದ್ದಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಟೆಕ್ಸಾಸ್ ನಲ್ಲಿ ನಡೆಸಲಾಗಿದ್ದ ದಾಳಿಯಲ್ಲಿ ಏಳು ಮಂದಿ ಭಾರತೀಯರು ಸಿಕ್ಕಿಬಿದ್ದಿದ್ದರು.