ಸ್ಪೇನ್ನ ಆಂಡಲೂಸಿಯಾದ ದಕ್ಷಿಣ ಭಾಗದಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿಯಾಗಿ 21 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಲಗಾದಿಂದ ಮ್ಯಾಡ್ರಿಡ್ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿ ಹಳಿ ದಾಟಿ ಮುಂದೆ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆ ರೈಲು ಕೂಡ ಹಳಿತಪ್ಪಿದೆ ಎಂದು ಅಲ್ಲಿನ ಅಡಿಫ್ ರೈಲು ಜಾಲ ನಿರ್ವಾಹಕರು ಮಾಹಿತಿ ನೀಡಿದ್ದಾರೆ.
ದುರಂತದಲ್ಲಿ 21 ಜನರು ಮೃತಪಟ್ಟಿದ್ದು, 73 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆಂಡಲೂಸಿಯಾದ ಉನ್ನತ ತುರ್ತು ಅಧಿಕಾರಿ ಆಂಟೋನಿಯೊ ಸ್ಯಾನ್ಜ್ ತಿಳಿಸಿದ್ದಾರೆ.
ಗಾಯಾಳುಗಳಲ್ಲಿ 30 ಜನರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಹೇಳಿದ್ದಾರೆ. ಸಂಪೂರ್ಣವಾಗಿ ನವೀಕರಿಸಲಾದ ಹಳಿಯ ನೇರ ಭಾಗದಲ್ಲಿ ಈ ದುರಂತ ಸಂಭವಿಸಿದೆ. ಮಲಗಾ-ಮ್ಯಾಡ್ರಿಡ್ ರೈಲಿನಲ್ಲಿ ಸುಮಾರು 300 ಜನರು ಇದ್ದರು ಎಂದು ರೈಲು ನಿರ್ವಾಹಕ ಇರ್ಯೊ ತಿಳಿಸಿದ್ದಾರೆ.


