Menu

ಮತ್ತೆ ಪತಿಯೊಂದಿಗೆ ಜೀವಿಸಬೇಕೆಂದು ವಿಚ್ಛೇದಿತೆ ಮನವಿ: ನಿರಾಕರಿಸಿದ ಹೈಕೋರ್ಟ್‌

ಮದುವೆಯಾದ ಮಹಿಳೆ ಪತಿಯೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪದೆ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಮತ್ತೆ ಆತನೊಂದಿಗೆ ಜೀವನ ನಡೆಸಲು ಬಯಸಿದ್ದು, ಆತ ಒಪ್ಪದಿದ್ದಾಗ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಆದರೆ ಕೋರ್ಟ್‌ ಆಕೆಯ ಮನವಿಯನ್ನು ನಿರಾಕರಿಸಿದೆ.

ಇದು ಪತಿಗೆ ಪತ್ನಿಯಿಂದ ಕಿರುಕುಳ ನೀಡಿರುವ ಪ್ರಕರಣವಾಗಿದೆ ಎಂದು ಹೈಕೋರ್ಟ್‌ ಹೇಳಿ. ಮದುವೆ ಅನೂರ್ಜಿತಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ಎತ್ತಿಹಿಡಿದಿದೆ. ವೈವಾಹಿಕ ಸಂಬಂಧ ಮತ್ತೆ ಆರಂಭಿಸಲು ಮತ್ತು ಮತ್ತು ಪತಿಯ ಅರ್ಜಿ ಪುರಸ್ಕರಿಸಿ ವಿಚ್ಛೇದನಕ್ಕೆ ಸಮ್ಮತಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಕೋಲಾರದ ನಿವಾಸಿ ಸುಮಾ ಎಂಬವರು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಅರ್ಜಿದಾರೆ ಸುಮಾ ಯಾರದೋ ಒತ್ತಡದಿಂದ ಮದುವೆಯಾಗಿಲ್ಲ. ಪೋಷಕರು ಈ ಮದುವೆ ನಿಶ್ಚಯಿಸಿದ್ದು, ಅದಕ್ಕೂ ಮೊದಲು ಸುಮಾ ರವಿಯೊಂದಿಗೆ ಸಮಾಲೋಚಿಸಿದ್ದರು. ಆತನ ಆರ್ಥಿಕ  ಸ್ಥಿತಿಗತಿ ತಿಳಿದುಕೊಂಡಿದ್ದರು. ಮದುವೆಯಾದ ಮೂರೇ ದಿನಕ್ಕೆ ಪತಿ ಮತ್ತವರ ಪೋಷಕರು 10 ಲಕ್ಷ ರೂ. ಹೆಚ್ಚುವರಿ ವರದಕ್ಷಿಣೆ ತರಲು ಒತ್ತಾಯಿಸಿ ಕಿರುಕುಳ ನೀಡಿ ತವರು ಮನೆಗೆ ವಾಪಸ್‌ ಕಳುಹಿಸಿದ್ದರು ಎನ್ನುವ ಸುಮಾ ಮಾತು ನಂಬಲಾಗದು ಎಂದು ಪೀಠ ಅರ್ಜಿ ವಿಚಾರಣೆ ವೇಳೆ ತಿಳಿಸಿದೆ.

ಪ್ರಕರಣದ ಸಾಕ್ಷ್ಯ ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ಮದುವೆ ನಂತರ ದೈಹಿಕ ಸಂಪರ್ಕ ಬೆಳೆಸಲು ಪತಿಗೆ ಸುಮಾ ಅನುಮತಿಸಿಲ್ಲ. ಇದೇ ವಿಚಾರವಾಗಿ ಜಗಳ ಮಾಡಿಕೊಂಡು ಪತಿ-ಪತ್ನಿ ಪೊಲೀಸ್‌ ಠಾಣೆಗೂ ಹೋಗಿದ್ದರು. ರವಿ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡದೆ ಸುಮಾ ತವರು ಮನೆಗೆ ಹೋಗುತ್ತಿದ್ದರು ಈ ನಡೆ ಕ್ರೌರ್ಯ ಎಂದು ಹೈಕೋರ್ಟ್‌ ತಿಳಿಸಿದೆ.

ಸುಮಾ ದೂರು ಆಧರಿಸಿ ರವಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಸಾಕ್ಷ್ಯವನ್ನೂ ಪತ್ನಿ ತೋರಿಸಿಲ್ಲ. ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಮೇಲೆ ಕ್ರಿಮಿನಲ್‌ ಆರೋಪ ಹೊರಿಸಿ ಪೊಲೀಸರಿಗೆ ಪದೇ ಪದೆ ದೂರು ದಾಖಲಿಸಿದ ಸುಮಾ ಮತ್ತೆ ಪತಿಯೊಂದಿಗೆ ವೈವಾಹಿಕ ಜೀವನ ನಡೆಸುವುದಾಗಿ ಹೇಳುತ್ತಿದ್ದಾರೆ. ಈ ನಿರ್ಣಯಕ್ಕೆ ಬರಲು ಯಾವ ಸನ್ನಿವೇಶಗಳು ನೆರವಾದವು ಎಂಬುದನ್ನೇ ಆಕೆ ಸ್ಪಷ್ಟಪಡಿಸಿಲ್ಲ. ಈ ಪ್ರಕರಣದಲ್ಲಿ ಪತ್ನಿಯ ಕ್ರೌರ್ಯ ಆಧಾರದ ಮೇಲೆ ವಿಚ್ಛೇದನ ಮಂಜೂರು ಮಾಡಿರುವ ಕೌಟುಂಬಿಕ ನ್ಯಾಯಾಲಯ ಆದೇಶ ಸೂಕ್ತವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ಸುಮಾ 2017ರ ಅ.30ರಂದು ವಿವಾಹವಾಗಿದ್ದರು. ಕೆಲವೇ ತಿಂಗಳಲ್ಲಿ ಪೊಲೀಸರಿಗೆ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದರು. ವರದಕ್ಷಿಣೆ ತರಲು ನಿರಾಕರಿಸಿದ್ದಕ್ಕೆ ಬಲವಂತವಾಗಿ ತವರು ಮನೆಗೆ ಕಳುಹಿಸಿದ್ದಾರೆ. ಪತಿ ಸದಾ ನನ್ನ ಶೀಲ ಶಂಕಿಸುತ್ತಾರೆ ಎಂದು ಆರೋಪಿಸಿದ್ದರು.

Related Posts

Leave a Reply

Your email address will not be published. Required fields are marked *