ಬೆಂಗಳೂರು: ಕಾಂಗ್ರೆಸ್ ವ್ಯವಸ್ಥೆಗೆ ಯಾರೂ ಸಹ ಅನಿವಾರ್ಯವಲ್ಲ, ನಮ್ಮ ಹೈಕಮಾಂಡ್ ಏನ್ ಹೇಳುತ್ತದೆ ಅದರ ತೀರ್ಮಾನವೇ ಅಂತಿಮ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಭವಿಷ್ಯದ ನಾಯಕ ಎಂಬ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾವಾಗ ಏನಾಗಬೇಕೆಂಬುದನ್ನ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನು ಬಿಟ್ಟರೇ ಬೇರೆಯವರ ಮಾತಿಗೆ ಮಾನ್ಯತೆ ಇಲ್ಲ. ಯತೀಂದ್ರ ಹೇಳಿಕೆಗೆ ನಾನು ವಿವರಣೆ ನೀಡುವುದಿಲ್ಲ ಎಂದು ಹೇಳಿದರು.
ನಮ್ಮ ಹೈಕಮಾಂಡ್ ಏನ್ ಹೇಳುತ್ತದೆ ಅದರ ತೀರ್ಮಾನವೇ ಅಂತಿಮ. ಸಿಎಂ, ಹೈಕಮಾಂಡ್ ಇದೆ, ಅವರು ನೋಡಿಕೊಳ್ಳುತ್ತಾರೆ. ಕಾಂಗ್ರೆಸ್ ವ್ಯವಸ್ಥೆಗೆ ಯಾರೂ ಸಹ ಅನಿವಾರ್ಯವಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಯಾರೂ ಕೂಡ ಅನಿವಾರ್ಯವಲ್ಲ. ಸಿದ್ದರಾಮಯ್ಯ ಈಗ ಸಿಎಂ ಆಗಿದ್ದಾರೆ. ಬದಲಾವಣೆ ಎಲ್ಲಿ? ನಾವು ತುಂಬಾ ಕ್ಲಿಯರ್ ಆಗಿದ್ದೇವೆ ಎಂದರು.


