Menu

ಮೇ 21ರವರೆಗೆ ಮಧ್ಯರಾತ್ರಿ ಹೆಬ್ಬಾಳ ಫ್ಲೈಓವರ್ ಸಂಚಾರ ಬಂದ್

ಬಿಡಿಎ ಕಾಮಗಾರಿ ಹಿನ್ನೆಲೆಯಲ್ಲಿ  ಮೇ 21ರವರೆಗೆ ಪ್ರತಿದಿನ ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆವರೆಗೆ ಹೆಬ್ಬಾಳ ಫ್ಲೈಓವರ್ ರಸ್ತೆ ಸಂಚಾರ ಬಂದ್​ ಆಗಲಿದೆ. ಎಸ್ಟೀಮ್​ ಮಾಲ್​ನಿಂದ ಬಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗ ಬಂದ್​ ಇರಲಿದ್ದು ಈ ವೇಳೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಸಂಚಾರ ಪೊಲೀಸ್ ವಿಭಾಗ​  ಪ್ರಕಟಣೆ ಹೊರಡಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲೇತುವೆಗೆ ಹೆಚ್ಚುವರಿ ಕ್ಯಾಂಪ್​ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಯ ಭಾಗವಾಗಿ, ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 7 ಉಕ್ಕಿನ ಗರ್ಡ್ ಗಳನ್ನು ಅಳವಡಿಸುವ ಕಾಮಗಾರಿ  ಮೇ 17ರಿಂದ ಆರಂಭಗೊಂಡಿದ್ದು,  21ರವರೆಗೆ ನಡೆಯಲಿದೆ.

ಈ ವೇಳೆ ಪ್ರತಿದಿನ 3 ಗಂಟೆ  ಅಂದರೆ ರಾತ್ರಿ 12 ರಿಂದ ಬೆಳಗಿನ ಜಾವ 03 ಗಂಟೆ ವರೆಗೆ ಕಾಮಗಾರಿ ನಡೆಯಲಿದೆ.  ಹಾಗಾಗಿ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದೆ. ಹೆಬ್ಬಾಳ ಮೇಲೇತುವೆಯಲ್ಲಿ ಎಸ್ಟೀಮ್ ಮಾಲ್​ನಿಂದ ಮೇಖ್ರಿ ವೃತ್ತದ ಕಡೆಗೆ ರಾತ್ರಿ 12 ರಿಂದ ಬೆಳಿಗ್ಗೆ 3 ಗಂಟೆ ವರೆಗೆ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಬಹುದಾಗಿದೆ ಎಂದು ತಿಳಿಸಲಾಗಿದೆ.

Related Posts

Leave a Reply

Your email address will not be published. Required fields are marked *