ಮೇ 31 ರವರೆಗೆ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಸ್ಥಿರ ಮಳೆ ಮತ್ತು ಮೋಡ ಕವಿದ ವಾತಾವರಣ ಇರುತ್ತದೆ.
ಮೇ 26 ರಿಂದ ಎರಡು ದಿನಗಳವರೆಗೆ ಹಗುರ ಮಳೆಯಾಗುವ ಮುನ್ಸೂಚನೆ ಇದ್ದು, 20°C ನಿಂದ 27°C ವರೆಗಿನ ತಾಪಮಾನ ಸ್ವಲ್ಪ ಕಡಿಮೆ ಇರುತ್ತದೆ. ಮೇ 28 ಮತ್ತು 29 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ತಾಪಮಾನ ಕನಿಷ್ಠ 19°C ಗೆ ಇಳಿಯುವ ಸಾಧ್ಯತೆ ಇದೆ. ತಿಂಗಳ ಕೊನೆಯ ಎರಡು ದಿನಗಳು – ಮೇ 30 ಮತ್ತು 31 ಮಳೆಯಾಗುವ ಸಾಧ್ಯತೆ ಇದ್ದು, 20°C ನಿಂದ 26°C ವರೆಗೆ ಸ್ಥಿರವಾದ ತಾಪಮಾನವನ್ನು ಕಾಯ್ದುಕೊಳ್ಳುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ಸುರಿದಿರುವ ಮಳೆಗೆ ಬೆಂಗಳೂರು ಬಸವಳಿದಿದ್ದು, ಆಗಿರುವ ಅವಾಂತರಗಳಿಂದ ಇನ್ನೂ ಪೂರ್ತಿಯಾಗಿ ಹೊರ ಬಂದಿಲ್ಲ, ಈಗ ಮತ್ತೆ ನಾಲ್ಕೈದು ದಿನ ನಿರಂತರ ಮಳೆ ಸುರಿದರೆ ಆಗಬಹುದಾದ ಅವಾಂತರ, ಅನಾಹುತಗಳ ಬಗ್ಗೆ ನಾಗರಿಕರು ಆತಂಕ ಪಡುವಂತಾಗಿದೆ.