ಬೆಂಗಳೂರು : ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 22ರ ವರೆಗೂ ಭಾರಿ ಮಳೆಯಾಗಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಹಾಸನ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ವಿಜಯನಗರ, ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಮಳೆಯಾಗಲಿದ್ದು, ಗಣೇಶ ಹಬ್ಬದ ವೇಳೆಗೆ ಮಳೆ ಸ್ವಲ್ಪ ಬಿಡುವು ನೀಡಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ವರದಿ
ಉಡುಪಿ, ಶೃಂಗೇರಿ, ಆಗುಂಬೆ, ಸಿದ್ದಾಪುರ, ಲೋಂಡಾ, ಕುಂದಾಪುರ, ಕೋಟಾ, ಕ್ಯಾಸಲ್ ರಾಕ್, ಮಂಕಿ, ಕೊಟ್ಟಿಗೆಹಾರ, ಕೊಪ್ಪ, ಕಮ್ಮರಡಿ, ಜೋಯಿಡಾ, ಹಳಿಯಾಳ, ಗೇರುಸೊಪ್ಪ, ಬಾಳೆಹೊನ್ನೂರು, ಯಲ್ಲಾಪುರ, ಶಿರಾಲಿ, ಮೂಡುಬಿದಿರೆ, ಖಾನಾಪುರ, ಕಾರವಾರ, ಕಳಸ, ಸಂಕೇಶ್ವರ, ಕುಮಟಾ, ಕಾರವಾರ, ಕಾರ್ಕಳ, ಹೊನ್ನಾವರ, ಧರ್ಮಸ್ಥಳ, ಚಿಕ್ಕೋಡಿ, ಪುತ್ತೂರು, ಕಲಘಟಗಿ, ಹುಕ್ಕೇರಿ, ಗೋಕರ್ಣ, ಚಿಟಗುಪ್ಪ, ಭಾಗಮಂಡಲ, ಬೆಳ್ತಂಗಡಿ, ಉಪ್ಪಿನಂಗಡಿ, ಮುಲ್ಕಿ, ಮುದ್ದೇಬಿಹಾಳ, ಬೆಳಗಾವಿ, ಕುಂದಗೋಳ, ಮಹಾಲಿಂಗಪುರ, ತರೀಕೆರೆ, ಆನವಟ್ಟಿ, ಧಾರವಾಡ, ಸೇಡಂ, ರಾಯಚೂರು, ಶಾಹಪುರ, ಪೊನ್ನಂಪೇಟೆ, ನೆಲೋಗಿ, ಮುಂಡಗೋಡು, ಮಾನ್ವಿ, ಕೆಂಭಾವಿ, ಹುಣಸಗಿ, ಎಚ್ಡಿ ಕೋಟೆ, ಭದ್ರಾವತಿ ಹಾಗೂ ಬಸವನ ಬಾಗೇವಾಡಿಯಲ್ಲಿ ಮಂಗಳವಾರ ಹೆಚ್ಚಿನ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದರೂ, ಅಲ್ಲಲ್ಲಿ ಬಿಸಿಲೂ ಕೂಡ ಇದೆ. ನಗರದಲ್ಲಿ 24.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್ಎಎಲ್ನಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.