Menu

ಹೃದಯಹೀನ ಕರ್ನಾಟಕ ಕಾಂಗ್ರೆಸ್‌ ಕನ್ನಡಿಗರ ಪಾಲಿಗೆ ಸತ್ತು ಹೋಯಿತು: ಆರ್‌. ಅಶೋಕ

ಎದೆ ಎತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು, ಆಕ್ರಂದನ ನಮ್ಮ ಮನಸ್ಸನ್ನು ತಲ್ಲಣಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಬಹುಶಃ ಕ್ರಿಕೆಟ್ ಆಟಗಾರರ ಜೊತೆ ತೆಗೆಸಿಕೊಂಡ ಸೆಲ್ಫಿ, ಪೋಟೋಗಳನ್ನು ನೋಡಿಕೊಂಡು ನಿನ್ನೆ ನಿಶ್ಚಿಂತೆಯಿಂದ ಮಲಗಿರಬಹುದು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಆದರೆ ನನಗಂತೂ ನಿನ್ನೆ ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಲು ಸಾಧ್ಯವಾಗಲಿಲ್ಲ. ಕಷ್ಟಪಟ್ಟು ಸಾಕಿ ಸಲಹಿದ ಮಕ್ಕಳು, ಬಾಳಿ ಬದುಕಬೇಕಾದ ಮಕ್ಕಳನ್ನು ಕಳೆದುಕೊಂಡ ಪೋಷಕರ, ಕುಟುಂಬಸ್ಥರ ಕಣ್ಣೀರು, ನೋವು, ಶೋಕವೇ ಇಡೀ ರಾತ್ರಿ ಕಣ್ಣು ಮುಂದೆ ಬರುತ್ತಿತ್ತು ಎಂದಿದ್ದಾರೆ.

ನಿನ್ನೆ ಸತ್ತಿದ್ದು 11 ಜನ ಮಾತ್ರವಲ್ಲ, ಮಾನವೀಯತೆ ಇಲ್ಲದ ಹೃದಯಹೀನ ಕರ್ನಾಟಕ ಕಾಂಗ್ರೆಸ್‌ ಪಕ್ಷವೂ ಕನ್ನಡಿಗರ ಪಾಲಿಗೆ ನಿನ್ನೆಯೇ ಸತ್ತು ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *