Menu

ಜ್ಯೋತಿಷಿ ಹೇಳಿದನೆಂದು ನಿಧಿಗಾಗಿ ಕಾರ್ಮಿಕನ ಹತ್ಯೆಗೈದು ಬಲಿ

ನಿಧಿ ಪಡೆಯಬೇಕೆಂಬ ದುರಾಸೆಯಿಂದ ಜ್ಯೋತಿಷಿ ಹೇಳಿದ  ಮಾತು ನಂಬಿ ವ್ಯಕ್ತಿಯೊಬ್ಬ ಚಪ್ಪಲಿ ಹೊಲೆಯುವ ಕಾರ್ಮಿಕನನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ನಡೆದಿದೆ.

ಜೆಜೆ ಕಾಲೋನಿ ನಿವಾಸಿ ಪ್ರಭಾಕರ್​ ಹತ್ಯೆಯಾದ ವ್ಯಕ್ತಿ. ಜ್ಯೋತಿಷಿ ರಾಮಕೃಷ್ಣನ ಮಾತು ಕೇಳಿ ಆನಂದ್ ರೆಡ್ಡಿ ಎಂಬಾತ ನರಬಲಿ ಕೊಟ್ಟಿದ್ದಾನೆ. ನರಬಲಿ ಕೊಟ್ಟ ಆರೋಪಿಯು ಆಂಧ್ರದ ಕಲ್ಯಾಣದುರ್ಗ ತಾಲೂಕಿನ ಕುಂದುರ್ಪಿ ಗ್ರಾಮದ ಆನಂದ ರೆಡ್ಡಿ ಹಾಗೂ ಜ್ಯೋತಿಷಿಯನ್ನು ಬಂಧಿಸಿದ್ದಾರೆ.

ಜ್ಯೋತಿಷಿ ರಾಮಕೃಷ್ಣ, ಪರಶುರಾಮಪುರ ಪಶ್ಚಿಮದಲ್ಲಿ ನರಬಲಿ ಕೊಟ್ಟರೆ ನಿಧಿ ಸಿಗುವುದು. ನರಬಲಿಯ ರಕ್ತವನ್ನು ಮಾರಮ್ಮ ದೇವಿಗೆ ಅರ್ಪಿಸಬೇಕೆಂದು ಆನಂದ ರೆಡ್ಡಿಗೆ ಹೇಳಿದ್ದನಂತೆ. ಜ್ಯೋತಿಷಿ ಮಾತು ಕೇಳಿದ ಆನಂದ ರೆಡ್ಡಿ, ಪಶ್ಚಿಮ‌ ದಿಕ್ಕಲ್ಲಿ ಬಂದ ಪ್ರಭಾಕರನಿಗೆ ಬೈಕಲ್ಲಿ ಡ್ರಾಪ್ ನೀಡುವುದಾಗಿ ಹೇಳಿ ಕರೆದೊಯ್ದು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ.

ಕೊಲೆ ಆರೋಪಿ ಆನಂದ ರೆಡ್ಡಿ ಪಾವಗಡದ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಆರೋಪಿ ಆನಂದ ರೆಡ್ಡಿ ಹಾಗೂ ಪಾವಗಡದ ಜ್ಯೋತಿಷಿ ರಾಮಕೃಷ್ಣನನ್ನು ಬಂಧಿಸಿ ಕೊಲೆಗೆ ಬಳಸಿದ್ದ ಮಚ್ಚು, ಬಟ್ಟೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Posts

Leave a Reply

Your email address will not be published. Required fields are marked *