ಕೆಡಿಎಂ ಕಿಂಗ್ ಎಂದು ಹೆಸರಾಗಿದ್ದ ಹಾವೇರಿ ಜಿಲ್ಲೆಯ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹೋರಿಯು ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದೆ. ಗ್ರಾಮಕ್ಕೆ ಆಗಮಿಸಿದ ಅಭಿಮಾನಿಗಳು ಹಾಗೂ ಊರಿನವರು ಈ ಹೋರಿಯ ಸಾವಿನಿಂದ ಶೋಕ ತಪ್ತರಾಗಿದ್ದಾರೆ.
ಸೋಲೆ ಇಲ್ಲದ ಸರದಾರ ಎಂದು ಹೆಸರು ಗಳಿಸಿದ್ದ ಹೋರಿ ಸಾವು ಉತ್ತರ ಕರ್ನಾಟಕದ ಫ್ಯಾನ್ಸ್‌ಗೆ ನೋವು ತಂದಿದೆ. ಕಾಂತೇಶ್ ನಾಯ್ಕರ್ ಎಂಬ ಮಾಲಿಕರಿಗೆ ಸೇರಿದ ಹೋರಿ ಇದಾಗಿದ್ದು, ಎಂಟು ಲಕ್ಷಕ್ಕೆ ಹೋರಿ ಕೊಡಿ ಎಂದು ಜಲ್ಲಿಕಟ್ಟು ತಂಡ ಕೇಳಿತ್ತು. ಆದರೆ ಹೋರಿ ಮೇಲಿನ ಪ್ರೀತಿಗೆ ಮಾರದೆ ಹಬ್ಬಕ್ಕೆ ತಯಾರಿ ನಡೆಸಲಾಗುತ್ತಿತ್ತು. ಈಗಾಗಲೆ 15 ತೊಲಿ ಬಂಗಾರ 8 ಬೈಕ್ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದಿರುವ ಹೋರಿ ಒಟ್ಟು 25 ಲಕ್ಷ ಮೌಲ್ಯದ ಬಹುಮಾನ ಗಳಿಸಿತ್ತು.
ತಮಿಳುನಾಡು, ಆಂಧ್ರಪ್ರದೇಶ, ದಾವಣಗೆರೆ, ಶಿವಮೊಗ್ಗ ,ಬಳ್ಳಾರಿ ಭಾಗದಿಂದ ಅಭಿಮಾನಿಗಳು ಹೋರಿಯನ್ನು ನೋಡಲು ಆಗಮಿಸುತ್ತಿದ್ದಾರೆ. ಮೆರವಣಿಗೆ ಮೂಲಕ ಅದ್ಧೂರಿಯಾಗಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.


