ಹಾಸನದ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ರೀಲ್ಸ್ ಹುಚ್ಚಿಗೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ರೀಲ್ಸ್‌ಗಾಗಿ ಟ್ರ್ಯಾಕ್ಟರ್ ಅನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದಾಗ ಅದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಯುವಕ ಸ್ಥಳದಲ್ಲೇ ಅಸು ನೀಗಿದ್ದಾನೆ.
ಮೃತನನ್ನು ವಿ.ಜಿ.ಕೊಪ್ಪಲು ಗ್ರಾಮದ ಕಿರಣ್ (19) ಎಂದು ಗುರುತಿಸಲಾಗಿದೆ. ಕಿರಣ್ ರೀಲ್ಸ್ ಗಾಗಿ ಟ್ರ್ಯಾಕ್ಟರ್ ವೇಗವಾಗಿ ಚಲಾಯಿಸುತ್ತಿದ್ದದ್ದಾಗ ರಸ್ತೆಯ ತಿರುವಿನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ರೀಲ್ಸ್‌ಗಾಗಿ ವಾಹನಗಳನ್ನು ಅತಿ ವೇಗವಾಗಿ ಚಲಾಯಿಸುವುದು, ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವುದು ಸಾಮಾನ್ಯ ಎಂಬಂತೆ ಆಗಿದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಜನರು ಇಂತಹ ಅಪಾಯಕಾರಿ ಕೆಲಸಗಳನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.