ಹಾಸನ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಪತಿ ಹಾಗೂ ಚಿಕ್ಕ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಪರಾರಿಯಾಗಿ ಕಾರಿನಲ್ಲೇ ಮದುವೆಯಾಗಿರುವ ಪ್ರಕರಣ ನಡೆದಿದೆ. ಎಂಟು ವರ್ಷಗಳ ದಾಂಪತ್ಯ, ಏಳು ವರ್ಷದ ಮಗನನ್ನು ತೊರೆದು ಹರ್ಷಿತಾ ಎಂಬಾಕೆ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲೇ ಮದುವೆಯಾಗಿದ್ದಾಳೆ.
ಹರ್ಷಿತಾಗೆ 2017ರಲ್ಲಿ ಅತ್ತೆಯ ಮಗ ಪ್ರಕಾಶ್ ಜೊತೆ ವಿವಾಹವಾಗಿತ್ತು. ದಂಪತಿಗೆ ಈಗ ಏಳು ವರ್ಷದ ಗಂಡು ಮಗನಿದ್ದಾನೆ. ಮಾರ್ಚ್ 30ರಂದು ‘ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೊರಟ ಹರ್ಷಿತಾ ವಾಪಸಾಗಿಲ್ಲ. ಕುಟುಂಬಸ್ಥರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಪತ್ತೆ ಹಚ್ಚಿ ಕರೆತಂದರು. ಆಕೆ ಪತಿ ಪ್ರಕಾಶ್ ಜೊತೆ ಹೋಗಲು ನಿರಾಕರಿಸಿ, ಪ್ರಿಯಕರ ಸಚಿನ್ ಜೊತೆ ಹೋಗುವುದಾಗಿ ಹೇಳಿದ್ದು, ಪೊಲೀಸರು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಕೆಲವು ದಿನ ಇದ್ದ ಆಕೆ, ಅತಿಯಾದ ರಕ್ತಸ್ರಾವವಾಗುತ್ತಿದೆ ಎಂದು ಸುಳು ಹೇಳಿ ಆಸ್ಪತ್ರೆಗೆ ಹೋಗುವುದಾಗಿ ಹೊರ ಬಂದು ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ತೆರಳಿ ತಾಳಿ ಕಟ್ಟಿಸಿಕೊಂಡಿದ್ದಾಳೆ.
ಎರಡನೇ ಮದುವೆಯ ಬಳಿಕ ಹರ್ಷಿತಾ ಮೊದಲ ಪತಿ ಪ್ರಕಾಶ್ಗೆ ಫೋನ್ ಮಾಡಿ, ನನ್ನದು ತಪ್ಪಾಯಿತು, ನನ್ನನ್ನು ಕ್ಷಮಿಸಿ, ಮಗನಿಗೆ ಅಮ್ಮನ ಅಗತ್ಯವಿದೆ ಎಂದು ಕಣೀರು ಹಾಕಿದ್ದಳು. ಪ್ರಕಾಶ್ ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದ. ಅದೇ ದಿನ ಮಧ್ಯರಾತ್ರಿ ಹರ್ಷಿತಾ ಮನೆ ಬಿಟ್ಟು ಪ್ರಿಯಕರ ಸಚಿನ್ ಜೊತೆ ಪರಾರಿಯಾಗಿದ್ದಾಳೆ.


