ಮೈಕ್ರೋ ಫೈನಾನ್ಸ್ನಿಂದ ಪಡೆದ 4.66 ಲಕ್ಷ ರೂ. ಸಾಲಕ್ಕೆ 7.20 ಲಕ್ಷ ರೂ. ಬಡ್ಡಿ ಕಟ್ಟಿರುವ ವ್ಯಕ್ತಿ ಮೃತಪಟ್ಟಿದ್ದು, ಈಗ ಫೈನಾನ್ಸ್ ಸಿಬ್ಬಂದಿಯು ಆತನ ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ತುಮಕೂರಿನಲ್ಲಿ ಕೇಳಿ ಬಂದಿದೆ.
ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ 2019ರಲ್ಲಿ ಫೈಸ್ ಸ್ಟಾರ್ ಫೈನಾನ್ಸ್ನಿಂದ ಪಡೆದ 4.66 ಲಕ್ಷ ರೂ. ಸಾಲಕ್ಕೆ 2024ವರೆಗೆ 7.20 ಲಕ್ಷ ರೂ. ಬಡ್ಡಿ ಕಟ್ಟಿದ್ದಾರೆ. ಕಳೆದ ಮೇ ತಿಂಗಳಲ್ಲಿ ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ.
ಸಾವಿಗಿಡಾದ ವ್ಯಕ್ತಿ. ಇವರು ಫೈಸ್ ಸ್ಟಾರ್ ಫೈನಾನ್ಸ್ನಿಂದ 4.66 ಮನೆ ಸಾಲ ಪಡೆದಿದ್ದರು. 2024 ಮೇವರೆಗೆ 7.20 ಲಕ್ಷ ಬಡ್ಡಿ ಕಟ್ಟಿದ್ದರು. ಆದರೆ ಅಸಲು ಬಾಕಿ ಉಳಿದಿತ್ತು. ಮತ್ತೆ ಅಸಲು ಕಟ್ಟುವಂತೆ ಫೈನಾನ್ಸ್ನವರು ಕಿರುಕುಳ ಕೊಡುತ್ತಿದ್ದರು. ಮೇ ತಿಂಗಳಲ್ಲಿ ಮೃತಪಟ್ಟ ಬಳಿಕ ಫೈನಾನ್ಸ್ನವರು ಸಮೀವುಲ್ಲಾ ಮನೆಗೆ ಬಂದು ಅವರ ಪತ್ನಿ ಬಳಿ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಪತಿಯಂತೆ ನಾನೂ ಮಕ್ಕಳೊಂದಿಗೆ ಸಾಯಬೇಕಾ ಗುತ್ತದೆ ಎಂದು ಪತ್ನಿ ತಬಸಮ್ ಬಾನು ಅಳಲು ವ್ಯಕ್ತಪಡಿಸಿದ್ದಾರೆ.