Menu

ಹಡಪದ ಅಪ್ಪಣ್ಣರಿಂದ ಸಮಾಜ ಸುಧಾರಣೆಗೆ ಹಲವು ಕೊಡುಗೆ: ಸಚಿವ ಎಂಬಿ ಪಾಟೀಲ

mb patil

ವಿಜಯಪುರ: ಅಣ್ಣ ಬಸವಣ್ಣನವರ ಪರಮಾಪ್ತರಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರು ಅನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೆರವಾಗುವ ಮೂಲಕ ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವಿಸಿದ ಬಳಿಕ ನಡೆದ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿದ್ದ 770 ಶರಣರು ತಾರತಮ್ಯ ಹೋಗಲಾಡಿಸಿ ಜಾತಿ, ವರ್ಗರಹಿತ, ಮೂಢನಂಬಿಕೆಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಲಿಂಗ ಸಮಾನತೆ ಹೊಂದಿರುವ ಸುಂದರ ಜಗತ್ತು ರೂಪಿಸುವುದು ಅವರ ಉದ್ದೇಶವಾಗಿತ್ತು. ಶರಣರ ವಚನಗಳು, ಅಂದಿನ ಅನುಭವ ಮಂಟಪದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಅಂದು ಕಲ್ಯಾಣ ಕ್ರಾಂತಿ ಆಗಿರದಿದ್ದರೆ ಬಸವ ಧರ್ಮ ಇಂದು ದೊಡ್ಡ ಧರ್ಮವಾಗಿರುತ್ತಿತ್ತು ಎಂದು ಹೇಳಿದ ಅವರು, ಈ ಕಾರ್ಯಕ್ರಮದ ಸಂಘಟಕರ ಬೇಡಿಕೆಗೆ ಸ್ಪಂದಿಸಲು ತಾವು ಸಿದ್ಧನಿದ್ದೇನೆ. ತಾವು ಮತ್ತು ಇನ್ನುಳಿದ ಸಣ್ಣ ಸಮುದಾಯದವರು ಬೇಡಿಕೆಯ ಮನವಿ ಪತ್ರವನ್ನು ತೆಗೆದುಕೊಂಡು ಬನ್ನಿ. ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ. ಸಿಎಂ ಕೂಡ ಬಸವ ಧರ್ಮದ ಪಾಲಕರಾಗಿದ್ದು, ಎಲ್ಲ ಸಮುದಾಯಗಳ ಬಡವರಿಗೂ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಇದೇ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅ;ರು, ಈಗ ರೂ. 50 ಲಕ್ಷ ನೀಡುವುದೂ ಸೇರಿದಂತೆ ಒಟ್ಟು ರೂ. 70 ಲಕ್ಷ ರೂಪಾಯಿಗಳ ದೇಣಿಗೆ ನೀಡಿತ್ತಿರುವೆ. ಇಲ್ಲಿ ಸುಂದರ ಸುಸಜ್ಜಿತ ದೇವಾಲಯ ನಿರ್ಮಾಣವಾಗಲಿ. ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಸರಕಾರದ ಜೊತೆ ಸಾರ್ವಜನಿಕರೂ ಕೈ ಜೋಡಿಸಬೇಕು. ಇಲ್ಲಿನ ಹನುಮಾನ ದೇವಸ್ಥಾನಕ್ಕೂ ರೂ. 50 ಲಕ್ಷ ಅನುದಾನ ನೀಡಲಾಗುತ್ತಿದೆ. ಬೀರಲಿಂಗೇಶ್ವರ ದೇವಸ್ಥಾನಕ್ಕೆ ರೂ. 30 ಲಕ್ಷ ಅನುದಾನ ಒದಗಿಸಲಾಗುತ್ತಿದೆ. ಕಾಖಂಡಕಿಯಲ್ಲಿ 110 ಕೆವಿ ಸ್ಟೇಷನ್ ನೀಡಲಾಗಿದೆ. ಮತಕ್ಷೇತ್ರದಲ್ಲಿ 42 ವಿದ್ಯುತ್ ಸ್ಟೇಷನ್ ಮಾಡಲಾಗಿದೆ. ಸಿ.ಎಸ್.ಆರ್ ಅನುದಾನದಡಿ ಮತಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಅವಕಾಶ ಸಿಕ್ಕಾದ ಅಧಿಕಾರದ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಜಿ, ಚಿಕ್ಕಆಲಗುಂಡಿಯ ಶ್ರೀ ಮಲ್ಲಿಕಾರ್ಜುನಮಠದ ಶ್ರೀ ಶಿವಶರಣಾನಂದ ಮಹಾಸ್ವಾಮೀಜಿ, ನಿಜಲಿಂಗ್ಯಯ ಶಾಸ್ತ್ರಿಗಳು, ಡಾ. ಭೀಮಾಶಂಕರ ಶರಣರು, ಸತ್ಯಣ್ಣ ಹಡಪದ, ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮುಖಂಡರಾದ ಸಂಜೀವ ಬಿ. ಕಾಖಂಡಕಿ, ಬಾಪುಗೌಡ ಪಾಟೀಲ, ಈರಗೊಂಡ ಬಿರಾದಾರ, ರಾಮನಗೌಡ ಪಾಟೀಲ, ಕುಮಾರ ದೇಸಾಯಿ, ವಿ. ಎಸ್. ಪಾಟೀಲ, ರಫೀಕ ಖಾನೆ, ಅಪ್ಪುಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಮಲ್ಲು ದಳವಾಯಿ, ಉಮೇಶ ಮಲ್ಲಣ್ಣವರ, ಕಾಂತು ಒಡೆಯರ, ಶೇಖು ದಳವಾಯಿ, ಸೈಯ್ಯದ ಸಾಹೇಬಪೀರಾ ಜಾಗಿರದಾರ, ಸತ್ಯಾನಂದ ಹಡಪದ, ರಾಜೇಂದ್ರಗೌಡ ಬಿ. ಪಾಟೀಲ, ಮಲ್ಲೇಶ ನಾವಿ, ಪದ್ಮಾವತಿ ಎಚ್. ಗೌಡಪ್ಪಗೋಳ, ಅಲ್ಲಿಸಾಬ ಖಡಕೆ, ಮಡ್ಡೆಸಾಬ ಬಾಗವಾನ, ಅನೀಲ ಗ. ಹಡಪದ, ಮಂಜು ಹಡಪದ, ಸಾಗರ ಹಡಪದ, ಸುರೇಶ ಹಡಪದ, ಮಹೇಶ ಹಡಪದ, ಮಹಾದೇವ ಹಡಪದ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *