Menu

ಕನ್ನಡಿಗರಿಗೆ ಅವಮಾನಿಸಿದ ಜಿಎಸ್‌ ಸೂಟ್‌ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಅರೆಸ್ಟ್‌

ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸಿ ಬರಹ ಪ್ರದರ್ಶನ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ಕೋರಮಂಗಲದ ಜಿ.ಎಸ್‌ ಸೂಟ್‌ ಹೋಟೆಲ್‌ ಅನ್ನು ಸೀಜ್‌ ಮಾಡಲಾಗಿದ್ದು, ಮ್ಯಾನೇಜರ್‌ ಸರ್ಫಜ್‌ ಎಂಬಾತನನ್ನು ಬಂಧಿಸಲಾಗಿದೆ.

ಮ್ಯಾನೇಜರ್‌ನನ್ನು ಅರೆಸ್ಟ್ ಮಾಡಿ ಜಿ.ಎಸ್ ಸೂಟ್ ಹೋಟೆಲ್‌ಗೆ ಮಡಿವಾಳ ಪೊಲೀಸರು ಬೀಗ ಹಾಕಿದ್ದಾರೆ. ಹೊಟೇಲ್ ಮಾಲೀಕ ಜಮ್‌ಶದ್‌ ಮೇಲೂ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಹೋಟೆಲ್‌ ಮಾಲೀಕ ಕೇರಳದಲ್ಲಿದ್ದಾರೆ.

ಜಿ.ಎಸ್‌ ಸೂಟ್‌ ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹ ಪ್ರದರ್ಶಿಸಲಾಗಿತ್ತು. ಸ್ಥಳೀಯರು ಅದನ್ನು ಗಮನಿಸಿ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು.

ಹೋಟೆಲ್‌ನ ಈ ನಡೆಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದರು.‌ ಮಡಿವಾಳ ಪೊಲೀಸ್‌ ಠಾಣೆ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ್‌ ಹೂಗಾರ್‌ ಹೋಟೆಲ್‌ ಮಾಲೀಕ ಜಮ್‌ಶದ್‌ ಮತ್ತು ಸರ್ಫರಾಜ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.

Related Posts

Leave a Reply

Your email address will not be published. Required fields are marked *