Thursday, January 22, 2026
Menu

ಕೆಐಎನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳವಿತ್ತ ನಿಲ್ದಾಣ ಸಿಬ್ಬಂದಿ ಅರೆಸ್ಟ್‌

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಗೆ ವಿಮಾನಯಾನ ಸಂಸ್ಥೆಯ ಗ್ರೌಂಡ್-ಹ್ಯಾಂಡ್ಲಿಂಗ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.  ಮೊಹಮ್ಮದ್ ಅಫ್ಘಾನ್ ಅಹ್ಮದ್ ಬಂಧಿತ.

ಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ತಪಾಸಣೆಯ ನೆಪದಲ್ಲಿ ಅನುಚಿತ ಸ್ಪರ್ಶಿಸಿ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿ ಧನ್ಯವಾದ ಹೇಳಿದ್ದಾಗಿ ದಕ್ಷಿಣ ಕೊರಿಯಾದ ಮಹಿಳಾ ಉದ್ಯಮಿ ದೂರು ನೀಡಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಆಗಮಿಸಿದ್ದ ಮಹಿಳೆ ಸ್ವದೇಶಕ್ಕೆ ವಾಪಸಾಗಲು ವಿಮಾನ ನಿಲ್ದಾಣದ ಟರ್ಮಿನಲ್ 2 ರ ಅಂತರರಾಷ್ಟ್ರೀಯ ನಿರ್ಗಮನ ಪ್ರದೇಶದಲ್ಲಿರಬೇಕಾದರೆ ಈ ಘಟನೆ ನಡೆದಿದೆ.  ನಿಲ್ದಾಣದ  ಗ್ರೌಂಡ್ ಸಿಬ್ಬಂದಿಯಾಗಿರುವ  ಕಮ್ಮನಹಳ್ಳಿಯ ಮೊಹಮ್ಮದ್ ಅಫ್ಫಾನ್ ಅಹ್ಮದ್ ಎಂಬಾತ ಬೆಳಗ್ಗೆ ಮಹಿಳೆಗೆ ತಾನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಎಂದು ಹೇಳಿಕೊಂಡು ಬೋರ್ಡಿಂಗ್ ಪಾಸ್ ಪರಿಶೀಲಿಸಿದ್ದಾನೆ. ಆಕೆಯ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಸಮಸ್ಯೆ ಇದೆ ಎಂದು ಹೇಳಿ ಹಸ್ತಚಾಲಿತ ತಪಾಸಣೆಗೆ ಬರುವಂತೆ ಕೇಳಿಕೊಂಡಿದ್ದಾನೆ. ಆಕೆಯನ್ನು ಪುರುಷರ ಶೌಚಾಲಯದ ಬಳಿ ಕರೆದೊಯ್ದು ಹಸ್ತಚಾಲಿತ ತಪಾಸಣೆಯ ನೆಪದಲ್ಲಿ ಎದೆಯನ್ನು ಹಲವು ಬಾರಿ ಮುಟ್ಟಿ ತಿರುಗಲು ಹೇಳಿ ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ ಎಂದು ಮಹಿಲೆ ದೂರಿನಲ್ಲಿ ತಿಳಿಸಿದ್ದಾರೆ.

ತಪಾಸಣೆಗೆಂದು ಕರೆದು ಆತ ಅಸಭ್ಯವಾಗಿ ವರ್ತಿಸಿದಾಗ ಮಹಿಳೆ ವಿರೋಧಿಸಿದ್ದಾರೆ. ಆಕೆಯನ್ನು ತಬ್ಬಿಕೊಂಡ ಆರೋಪಿ ಧನ್ಯವಾದ ಹೇಳಿ ಅಲ್ಲಿಂದ ಹೊರಹೋಗುವಂತೆ ಹೇಳಿದ್ದಾನೆ. ಮಹಿಳೆಯ ದೂರಿನ ಅನ್ವಯ ನಿಲ್ದಾಣದ ಅಧಿಕಾರಿಗಳು ಏರ್ ಇಂಡಿಯಾದ ನೆಲಮಟ್ಟದ ಸಿಬ್ಬಂದಿ ಅಹ್ಮದ್ ಅವರನ್ನು ವಶಕ್ಕೆ ಪಡೆದು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರನ್ನು ದೈಹಿಕವಾಗಿ ಪರೀಕ್ಷಿಸುವ ಅಧಿಕಾರ ಅಹ್ಮದ್‌ಗೆ ಇಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆತನಿಗೆ ಅನುಮಾನ ಬಂದರೆ ವಲಸೆ ಅಥವಾ ಸಿಐಎಸ್‌ಎಫ್ ಸಿಬ್ಬಂದಿಗೆ ಆತ ಮಾಹಿತಿ ನೀಡಬೇಕು. ಅಧಿಕೃತ ಮಹಿಳಾ ಸಿಬ್ಬಂದಿಯಿಂದ ತಪಾಸಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ಮಹಿಳೆಯ ಹೇಳಿಕೆಯನ್ನು ದೃಢಪಡಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹ್ಮದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

Related Posts

Leave a Reply

Your email address will not be published. Required fields are marked *