Menu

ವಿಕಿಪೀಡಿಯಾಗೆ ಪ್ರತಿಯಾಗಿ ಗ್ರೋಕಿಪೀಡಿಯಾ ಶೀಘ್ರ ಬಿಡುಗಡೆ: ಎಲಾನ್‌ ಮಸ್ಕ್‌

ಟೆಸ್ಲಾ ಮುಖ್ಯಸ್ಥ ವಿಶ್ವದ ನಂಬರ್‌ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ವಿಕಿಪೀಡಿಯಾಗೆ ಪ್ರತಿಯಾಗಿ ಗ್ರೋಕಿಪೀಡಿಯಾ ತರುವುದಾಗಿ ಘೋಷಣೆ ಮಾಡಿದ್ದು ಆರಂಭಿಕ ಆವೃತ್ತಿಯನ್ನು ಮುಂದಿನ ಎರಡು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಗ್ರೋಕಿಪೀಡಿಯಾ ಜನರು ಮತ್ತು ಎಐ ಬಳಕೆಗೆ ಯಾವುದೇ ಮಿತಿಗಳಿಲ್ಲದೆ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ನಿಖರ ಜ್ಞಾನ ಮೂಲವಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಮಸ್ಕ್‌ ವಿಕಿಪೀಡಿಯಾವನ್ನು ಟೀಕಿಸುತ್ತಲೇ ಬಂದಿದ್ದು, ಅದನ್ನು ಎಡಪಂಥೀಯರು ನಿಯಂತ್ರಿಸುತ್ತಿದ್ದು ದೇಣಿಗೆ ನೀಡಬೇಡಿ ಮಸ್ಕ್‌ ಬಹಿರಂಗ ಕರೆ ನೀಡಿದ್ದರು. ವಿಕಿಪೀಡಿಯಾ ತಟಸ್ಥ ನೀತಿಯನ್ನು ಹೊಂದಿಲ್ಲ. ಪಕ್ಷಪಾತಿಯವಾಗಿ ಕೆಲಸ ಮಾಡುತ್ತಿದೆ ಎಂದೂ ಆರೋಪಿಸಿದ್ದರು.

ಎಐಗಳು ಇಂಟರ್‌ನೆಟ್‌ನಿಂದ ಮಾಹಿತಿ ಪಡೆದು ಉತ್ತರ ನೀಡುತ್ತಿವೆ. ವಿಕಿಪೀಡಿಯಾದ ಉತ್ತರವನ್ನು ಬಳಸುವುದರಿಂದ ತಪ್ಪು ಮಾಹಿತಿಗಳಿಗೆ ಪ್ರಚಾರ ಸಿಗುತ್ತಿವೆ. ಗ್ರೋಕಿಪೀಡಿಯಾವನ್ನು ಯಾವುದೇ ರಾಜಕೀಯ ಪಕ್ಷಗಳು ನಿಯಂತ್ರಿಸುವುದಿಲ್ಲ. ಇದು ಎಲ್ಲರ ಬಳಕೆಗೂ ಮುಕ್ತ ಮೂಲವಾಗಿರುತ್ತದೆ ಎಂದು ಮಸ್ಕ್‌ ಹೇಳಿದ್ದಾರೆ.

ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದಂತೆ ವಿಕಿಪೀಡಿಯಾದ ಸಂಪಾದಕರು ಇಸ್ರೇಲ್‌ ವಿರುದ್ಧ ಮತ್ತು ಹಮಾಸ್‌ ಪರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ಕುರಿತವ ವ್ಯಾಖ್ಯಾನ ಬದಲಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಅನುಕೂಲವಾಗುವಂತೆ ಎಡಿಟ್‌ ಮಾಡಲಾಗುತ್ತಿದೆ. ಇಸ್ಲಾಮಿಕ್ ರಿಪಬ್ಲಿಕ್ ಪಾರ್ಟಿ ಅಧಿಕಾರಿಗಳು ಮಾಡಿರುವ ಮಾನವ ಹಕ್ಕುಗಳ ಅಪರಾಧಗಳನ್ನು ಅಳಿಸಿ ಹಾಕಲಾಗಿದೆ. ಹಲವಾರು ಲೇಖನಗಳಲ್ಲಿ ಇರಾನ್ ಸರ್ಕಾರದ ಹಿತಾಸಕ್ತಿಗಳನ್ನು ಉತ್ತೇಜಿಸಲು ಗುಂಪು ಪ್ರಯತ್ನಿಸುತ್ತಿದೆ ಎಂದು ಮಸ್ಕ್‌ ಗಂಭೀರ ಆರೋಪ ಕೂಡ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *