ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಪ್ರಯತ್ನ ಆರಂಭ ಮಾಡಿದೆ. ಟೆಸ್ಟ್ ಮ್ಯಾಚ್ ಗಿಂತಾಲೂ ಹೆಚ್ಚಾಗಿ ಧರ್ಮಸ್ಥಳದ ವಿಚಾರ ದಿನ ನಡೆಯುತ್ತಿದೆ. ನಮ್ಮ ಧರ್ಮಾಧಿಕಾರಿ ಹೆಗ್ಡೆ ಅವರು ಯಾಕೆ ನಿಮಗೆ ಟಾರ್ಗೆಟ್, ಅನಾಮಿಕನ ಪೂರ್ವಾಪರ ಮೊದಲು ಬಹಿರಂಗ ಆಗಲಿ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದ್ದಾರೆ.
ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲಾ ಸೌಜನ್ಯ ಪರ. ಮೂರು ತನಿಖಾ ಸಂಸ್ಥೆ ಯಿಂದ ತನಿಖೆ ಆಗಿದೆ. ಬೇರೆ ಇನ್ನೂ ಯಾವುದಾದರೂ ಮೂಲಕ ತನಿಖೆ ಆಗಬೇಕಿದ್ದರೆ ಸೌಜನ್ಯ ತಾಯಿ ಹೇಳಲಿ. ನಾವೇ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ. ಧರ್ಮಸ್ಥಳದಲ್ಲಿ ಸಾವಿರಾರು ಕೊಲೆ ಆಗಿದೆ ಅಂತಾರೆ. ಇದು ವಾಸ್ತವದಲ್ಲಿ ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಅರೋಪಿ ಅಂತ ತೀರ್ಮಾನ ಮಾಡಿ ಅದಕ್ಕೆ ಬೇಕಾದ ಸಾಕ್ಷಿ ಈಗ ಹುಡುಕುತ್ತಿದೆ. ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವುದ್ ಇಬ್ರಾಹಿಂ ಥರ ದೊಡ್ಡ ಡಾನಾ, ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಒಂದೇ ಒಂದು ಸಾಕ್ಷಿ ಇಲ್ಲದೆ ಯಾಕೆ ವಿರೇಂದ್ರ ಹೆಗ್ಡೆ ಅವರನ್ನು ಆರೋಪಿ ಸ್ಥಾನಕ್ಕೆ ತರಲಾಗಿದೆ, ಹಿಂದೂ ಸಮಾಜ ಪ್ರಜಾವಂತಿಕೆ ಕಳೆದುಕೊಂಡಿದೆ. ಧರ್ಮಸ್ಥಳ ಟಾರ್ಗೆಟ್ ಮಾಡಿರುವುದು ಹಿಂದೂ ಸಮಾಜಕ್ಕೆ ಅರ್ಥವಾಗುತ್ತಿಲ್ಲ.
ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸವನ್ನು ಇಸ್ಲಾಂ ಧರ್ಮದ ಯಾವನೋ ಒಬ್ಬ ಮಾಡುತ್ತಾನೆ. ಅದನ್ನು ಹಿಂದೂಗಳು ನಂಬುತ್ತಿದ್ದಾರೆ ಎಂದರು.
ಆರೋಪಿಯನ್ನು ಮೊದಲೆ ನಿರ್ಧರಿಸಿ ಅದಕ್ಕೆ ಬೇಕಾದ ಸಾಕ್ಷಿ ಹುಡುಕುತ್ತಿರುವ ಮೊದಲ ಪ್ರಕರಣ ಇದು. ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿ ಜನರ ಭಾವನೆಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆ ಮಾಡಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಹುಡುಕಾಟಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.