Wednesday, November 05, 2025
Menu

ಕಾರ್ಮಿಕರ ಪರ ವಾದಿಸಲು ವಕೀಲರ ಪಟ್ಟಿ ರಚನೆಗೆ ಸರ್ಕಾರದ ಅನುಮೋದನೆ

ಕಾರ್ಮಿಕರ ಕಾನೂನುಬದ್ಧ ಹಕ್ಕುಗಳನ್ನು ಕಾಪಾಡಿ ಅವರಿಗೆ ನ್ಯಾಯ ಒದಗಿಸಿ ಕೊಡಲು ಅನುಭವವುಳ್ಳ ವಕೀಲರು ಹಾಗೂ ಕಾರ್ಮಿಕ ಕಾನೂನು ತಜ್ಞರನ್ನು ಒಳಗೊಂಡ ವಕೀಲರ ಯಾದಿ/ ಪಟ್ಟಿ (Panel of Advocates) ರಚಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.

ನ್ಯಾಯಾಲಯಗಳಲ್ಲಿ ಕಾರ್ಮಿಕರು, ಕಾರ್ಮಿಕ ಸಂಘಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಹಲವು ಪ್ರಕರಣಗಳು ಸದ್ಯ ಬಾಕಿ ಉಳಿದಿವೆ. ಪ್ರಕರಣಗಳು ವಿವಿಧ ಕಾರಣಗಳಿಂದ ವಿಳಂಬವಾಗುತ್ತಿ ರುವುದರಿಂದ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಒದಗಿಸಲು ಕಾರ್ಮಿಕ ಇಲಾಖೆ ಈ ವಿಶಿಷ್ಟ ಕ್ರಮ ಕೈಗೊಂಡಿದೆ. ಈ ಮೂಲಕ ಕಾರ್ಮಿಕರ ಕಾನೂನುಬದ್ದ ಹಕ್ಕುಗಳನ್ನು ರಕ್ಷಿಸುವಲ್ಲಿ ಅವರಿಗೆ ಕಾನೂನು ನೆರವು ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಈ ಹಿನ್ನೆಲೆಯಲ್ಲಿ, ಹತ್ತು ಜನ ವಕೀಲರ ಯಾದಿ/ಪಟ್ಟಿ ರಚಿಸಲು ಅನುಮೋದನೆ ನೀಡಿದ್ದು, ವಕೀಲರ ನೇಮಕದಲ್ಲಿ ಪಾರದರ್ಶಕತೆ, ಕಾರ್ಮಿಕ ಕಾನೂನು ಕುರಿತು ಜ್ಞಾನ/ ಪರಿಣತಿ/ ಅನುಭವ ಇರುವವರಿಗೆ ಆದ್ಯತೆ ಸೇರಿದಂತೆ, ವಕೀಲರ ಆಯ್ಕೆ, ಕಾರ್ಯವಿಧಾನ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣಾ (ಎಸ್‌ಒಪಿ) ತಯಾರಿಸಬೇಕಿದೆ. ಈ ವಕೀಲರಿಗೆ ಪಾವ ತಿಸಬೇಕಾದ ಸಂಭಾವನೆಗೆ ಕಾನೂನು ಇಲಾಖೆಯ ಆದೇಶಗಳನ್ನು ಅನುಸರಿಸಬೇಕೆಂಬ ಷರತ್ತುಗಳನ್ನು ವಿಧಿಸಿದೆ.

ರಾಜ್ಯದ ಕಾರ್ಮಿಕ ನ್ಯಾಯಾಲಯ ಹಾಗೂ ಕೈಗಾರಿಕಾ ನ್ಯಾಯಮಂಡಳಿಗಳಲ್ಲಿ ಸಾಕಷ್ಟು ಕಾರ್ಮಿಕ ಸಂಬಂಧಿತ ದಾವೆಗಳು ಬಾಕಿ ಉಳಿದಿದ್ದು, ಅವುಗಳ ಅಂಕಿ ಅಂಶ ಇಂತಿದೆ, ಬೆಂಗಳೂರು ನಗರ ಮತ್ತು ಗ್ರಾಮೀಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ 2023-24 ರಲ್ಲಿ 563 ದಾವೆಗಳು ಹಾಗೂ 2024-25 ರಲ್ಲಿ 446 ದಾವೆಗಳು ಬಾಕಿ ಇವೆ. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ 2023-24 ರಲ್ಲಿ 91 ದಾವೆಗಳು, 2024-25 ರಲ್ಲಿ 99 ದಾವೆಗಳು ಬಾಕಿ ಇವೆ. ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆ ಗಳಲ್ಲಿ 2023-24 ರಲ್ಲಿ 424 ದಾವೆಗಳು, 2024-25 ರಲ್ಲಿ 200 ದಾವೆಗಳು ಬಾಕಿ ಇವೆ. ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ದಾವಣಗೆರೆ, ಹಾವೇರಿ, ಮಂಗಳೂರು, ಉಡುಪಿ, ಕಾರವಾರದಲ್ಲಿ 2023-24 ರಲ್ಲಿ 346 ದಾವೆಗಳು, 2024-25 ರಲ್ಲಿ 212 ದಾವೆಗಳು ಬಾಕಿ ಇವೆ. ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಮಡಿಕೇರಿ ಗಳಲ್ಲಿ 2023-24 ರಲ್ಲಿ 59 ಹಾಗೂ 2024-25 ರಲ್ಲಿ 59 ದಾವೆಗಳು ಬಾಕಿ ಇವೆ.

Related Posts

Leave a Reply

Your email address will not be published. Required fields are marked *