ಗೋವಾದಲ್ಲಿ ಕನ್ನಡಿಗ ಕಾರ್ಮಿಕ ಮೇಲೆ ಹಲ್ಲೆ ದೌರ್ಜನ್ಯ ನಡೆಯುತ್ತಿದ್ದು, ಅಲ್ಲಿನ ಕನ್ನಡಿಗರು ರಕ್ಷಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕನ್ನಡಿಗ ಲಾರಿ ಡ್ರೈವರ್ ಮೇಲೆ ಅಲ್ಲಿನ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ ಮೇಲೆ ಗಂಭೀರವಾಗಿ ಹಲ್ಲೆಯಾಗಿದೆ.
ಗೋವಾದ ಪ್ರೆಡ್ನೆ ಹತ್ತಿರದ ರಸ್ತೆಯಲ್ಲಿ ಓಮಿನ್ ಕಾರ್, ಜೀಪ್ ನಲ್ಲಿ ಬಂದು ದುಷ್ಕರ್ಮಿಗಳು ಟ್ರಕ್ ಅಡ್ಡಗಟ್ಟಿ ಗೂಂಡಾಗಿರಿ ನಡೆಸಿದ್ದಾರೆ. ಟ್ರಕ್ ಚಾಲಕ ಅನಿಲ್‌ಗೆ ಥಳಿಸಿ ನಿಂದಿಸಿದ್ದಾರೆ.
ಮಹಾರಾಷ್ಟ್ರದಿಂದ ಗೋವಾಗೆ ಕಟ್ಟಡಕ್ಕೆ ಕಲ್ಲು ತೆಗೆದುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಸತತ ಆರು ತಿಂಗಳಿನಿಂದ ಗೋವಾದಲ್ಲಿ ಕನ್ನಡಿಗರ ಮೇಲೆ ದಾಳಿ ನಡೆಯುತ್ತಿದೆ.
ಗೋವಾ ರಾಜ್ಯದ ಮಾಪ್ಸಾ ಟ್ರಕ್ ಮಾಲೀಕರ ಸಂಘದ ಮುಖಂಡರಾದ ಸಮೀರ್ ಶೆಟ್ಟರ್ ಮತ್ತು ಸುರೇಶ್ ಪಟ್ಟಿಗೇರಿ ಘಟನೆಯನ್ನು ಖಂಡಿಸಿದ್ದಾರೆ.