ದಾವಣಗೆರೆಯ ಹೊನ್ನಾಳಿ ಪಟ್ಟಣದ ಸರ್ವರಕೇರಿಯಲ್ಲಿ ನಡೆದ ಆಭರಣ ಕಳವು ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಚುರ್ಚುಗುಂಡಿ ಗ್ರಾಮದ ಶಿವರಾಜ್ ಪಿ.ಎಸ್. ಬಂಧಿತ. ಮಾಂಗಲ್ಯ ಸರ, ಬ್ರೇಸ್‍ಲೈಟ್, ಚೈನ್, 2 ಉಂಗುರ, 6 ಜೊತೆ ಕಿವಿಯೋಲೆ ಸೇರಿ ಒಟ್ಟು 109 ಗ್ರಾಂ ಆಭರಣಗಳು ಹಾಗೂ 25 ಗ್ರಾಂ ಬೆಳ್ಳಿಯ ಚೈನ್ ಸೇರಿ ಒಟ್ಟು ₹ 5.50 ಲಕ್ಷ ಮೌಲ್ಯದ ಆಭರಣಗಳು ಕಳುವಾಗಿರುವ ಬಗ್ಗೆ ಸರ್ವರಕೇರಿಯ ಎಚ್.ಬಿ. ಸಂತೋಷ್ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಎರಡು ಕಳವು ಪ್ರಕರಣ ದಾಖಲಾಗಿವೆ ಎಂದು ಪೊಲೀಸಸರು ತಿಳಿಸಿದ್ದಾರೆ.