ಚಿನ್ನ ಕಳ್ಳಸಾಗಣೆ ಆರೋಪದಡಿ ಜೈಲಿನಲ್ಲಿರುವ ನಟಿ ರನ್ಯಾ ರಾವ್ ಅವರನ್ನು ಭೇಟಿ ಮಾಡಿರುವ ಡಿಆರ್ಐ ಅಧಿಕಾರಿಗಳು 102.55 ಕೋಟಿ ರೂ. ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ.
127.3 ಕೆಜಿ ಚಿನ್ನ ಸಾಗಣೆ ಪ್ರಕರಣ ಸಂಬಂಧ ಡಿಆರ್ಐ ರನ್ಯಾಗೆ ಶೋಕಾಸ್ ನೋಟಿಸ್ ನೀಡಿ, 102.55 ಕೋಟಿ ದಂಡ ಪಾವತಿಸಲು ಸೂಚಿಸಿದೆ. ಕಳೆದ ಮಾರ್ಚ್ 4ರಂದು ಡಿಆರ್ಐ ಅಧಿಕಾರಿಗಳು ರನ್ಯಾ ರಾವ್ ತಂದಿದ್ದ ಗೋಲ್ಡ್ ವಶಕ್ಕೆ ಪಡೆದು ಆಕೆಯನ್ನು ಬಂಧಿಸಿದ್ದರು. 127.3ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರೋದು ತನಿಖೆಯಲ್ಲಿ ದೃಢವಾದ ಬಳಿಕ ಆಕೆಗೆ ಗೆ 102.55 ಕೋಟಿ ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ರನ್ಯಾ ರಾವ್ ಸೇರಿ ಪ್ರಕರಣದ ನಾಲ್ವರೂ ಆರೋಪಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ದಂಡ ಪಾವತಿಸಲಿದ್ದಲ್ಲಿ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳುವ ಸಾಧ್ಯತೆ ಇದೆ. ಎರಡನೇ ಆರೋಪಿ ತರುಣ್ ಕೊಂಡೂರು ರಾಜು 67.6 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ದೃಢಪಟ್ಟಿದ್ದು, 62 ಕೋಟಿ ದಂಡ ವಿಧಿಸಿದೆ. ಸಾಹಿಲ್ ಜೈಲ್ ಮತ್ತು ಭರತ್ ಜೈನ್ ತಲಾ 63.61ಕೆಜಿ ಕಳ್ಳಸಾಗಣೆ ಮಾಡಿದ್ದಕ್ಕೆ 53ಕೋಟಿ ದಂಡ ಪಾವತಿಗೆ ಸೂಚನೆ ನೀಡಲಾಗಿದೆ.
ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ಮುಂದುವರಿಯಲಿದೆ, ನೋಟಿಸ್ ಸೇರಿ 2,500 ಪುಟಗಳ ದಾಖಲೆಗಳನ್ನ ಡಿಆರ್ಐ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ. ಹೈಕೋರ್ಟ್ನಲ್ಲಿ ಕಾಫಿಪೋಸಾ ಅರ್ಜಿ ವಿಚಾರಣೆಯನ್ನು ಸೆ.11ಕ್ಕೆ ಹೈಕೋರ್ಟ್ ಮುಂದೂಡಲಾಗಿದೆ.