Menu

ಚಿನ್ನ ಗಗನಮುಖೀ, ಗ್ರಾಹಕ ಪಾತಾಳಮುಖಿ!

ಮುಂಬೈ: ಚಿನ್ನದ ದರ ದಿನದ ಲೆಕ್ಕದಲ್ಲಿ ಭಾರಿ ಏರಿಕೆ ಕಣುತ್ತಿದ್ದು, ಜನ ಸಾಮಾನ್ಯರಿಗೆ ಸ್ವರ್ಣಲೋಹದ ಸಿಂಚನವು ಗಗನ ಕುಸುಮವಾಗಿ ದಿನೇದಿನೆ ಪರಿಣಮಿಸುತ್ತಿದೆ.

ಹಬ್ಬದ ಋತುವಿನ ಆಗಮನದೊಮದಿಗೆ ಚಿನ್ನದ ವಿಪರೀತ ಧಾರಣೆಯು ಗ್ರಾಃಕರ ಉತ್ಸಾಹಕ್ಕೆ ತಣ್ಣಿರು ಎರಚಿದೆ ಎಂದರೆ ತಪ್ಪಿಲ್ಲ.
ಮುಂಬೈನ ಸ್ಪಾಟ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ 10 ಗ್ರಾಂಗೆ ರೂ. 90,500 ರಿಂದ ರೂ. 90,800 ರೂಪಾಯಿಗಳವರೆಗೂ ವಹಿವಾಟಾಗುತ್ತಿದೆ.

ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಪ್ರತಿ ಔನ್ಸ್ಗೆ $೩,೦೦೦ ದಾಟಿದ ಅಂತರರಾಷ್ಟ್ರೀಯ ಚಿನ್ನದ ಬೆಲೆಗಳು ದೇಶೀಯ ಬೇಡಿಕೆಯ ಮೇಲೆ ಪರಿಣಾಮ ಬೀರಿವೆ.

ಮದುವೆ ಸೀಸನ್ ಈಗಾಗಲೇ ಪ್ರಾರಂಭವಾಗಿರುವುದರ ನಡುವೆಯೇ ಚಿನ್ನದ ಬೆಲೆ ಏರುಗತಿಯಲ್ಲಿದ್ದು, ಬೇಡಿಕೆ ಮರಳುತ್ತದೆಯೇ ಎಂದು ಆಭರಣ ಉದ್ಯಮ ಚರ್ಚಿಸುತ್ತಿದೆ.

ಪ್ರಸ್ತುತ ಹೆಚ್ಚಿನ ಬೆಲೆಗಳಲ್ಲಿ, ಪರಿಮಾಣದ ದೃಷ್ಟಿಯಿಂದ ಚಿನ್ನದ ಅತಿದೊಡ್ಡ ಖರೀದಿದಾರ ಸಮುದಾಯವಾಗಿರುವ ಕಡಿಮೆ ಮತ್ತು ಮಧ್ಯಮ-ಆದಾಯದ ಜನರಿಗೆ, ಚಿನ್ನ ಕೈಗೆಟುಕುವಂತಿಲ್ಲ ಎಂದು ಲಂಡನ್ ಮೂಲದ ಬುಲಿಯನ್ ಸಂಶೋಧನಾ ಸಂಸ್ಥೆ ಹೇಳಿದೆ.

ಶ್ರೀಮಂತರು ಮಾತ್ರ ಚಿನ್ನವನ್ನು ಖರೀದಿಸುತ್ತಾರೆ ಎಂಬ ಸಾಮಾನ್ಯ ಗ್ರಹಿಕೆಗೆ ವ್ಯತಿರಿಕ್ತವಾಗಿ, ಶೇಕಡಾ ೫೬ ರಷ್ಟು ಚಿನ್ನವನ್ನು ವಾರ್ಷಿಕವಾಗಿ ರೂ. 2 ಲಕ್ಷದಿಂದ ರೂ. 10 ಲಕ್ಷದವರೆಗೆ ಗಳಿಸುವ ಜನರು ಖರೀದಿಸಿದ್ದಾರೆ.

2022 ರಿಂದ, ಚಿನ್ನದ ಬೆಲೆ ದ್ವಿಗುಣಗೊಂಡಿದೆ, ಆದರೆ ಈ ವರ್ಗದ ಖರೀದಿದಾರರ ಉಳಿತಾಯವು ದ್ವಿಗುಣಗೊಂಡಿಲ್ಲ ಎಂದು ಐಐಎಂ ಅಹಮದಾಬಾದಿನ ಇಂಡಿಯನ್ ಗೋಲ್ಡ್ ಪಾಲಿಸಿ ಸೆಂಟರ್ 20022 ರಲ್ಲಿ ನಡೆಸಿದ ಸಮೀಕ್ಷೆಯು ತಿಳಿಸಿದೆ.

ಈ ಪರಿಸ್ಥಿತಿಯಲ್ಲಿ ಹೆಚ್ಚಿನ ಚಿನ್ನವನ್ನು ಖರೀದಿಸುವ ಅವರ ಸಾಮರ್ಥ್ಯವನ್ನು ಚಿನ್ನದ ದರ ಏರಿಕೆ ಕಡಿಮೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Related Posts

Leave a Reply

Your email address will not be published. Required fields are marked *