2.5 ಬಿಲಿಯನ್ (250 ಕೋಟಿ) ಬಳಕೆದಾರರ ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಮಾಡಬಹುದಾಗಿದೆ ಎಂದು ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಫೋರ್ಬ್ಸ್ ವರದಿಯ ಪ್ರಕಾರ, ಸೈಬರ್ ವಂಚಕರು ಗೂಗಲ್ ಬೆಂಬಲದ ಹೆಸರಿನಲ್ಲಿ ಕರೆ ಮಾಡುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಯಾವುದೇ ಫೇಕ್ ಕಾಲ್ ನಂಬಬೇಡಿ ಮತ್ತು ಕೂಡಲೇ ನಿಮ್ಮ ಜಿಮೇಲ್ ಖಾತೆಯ ಪಾಸ್ ವರ್ಡ್ ರೀಸೆಟ್ ಮಾಡಿ ಎಂದು ಗೂಗಲ್ ಬಳಕೆದಾರರಿಗೆ ತಿಳಿಸಿದೆ.
ವಂಚಕರು ಬಳಸಿದ ಕಾಲರ್ ಐಡಿ ನೈಜವಾಗಿ ಕಾಣುತ್ತದೆ, ಇದರಿಂದಾಗಿ ಬಳಕೆದಾರರು ಸುಲಭವಾಗಿ ನಂಬುತ್ತಾರೆ. ಹ್ಯಾಕರ್ಗಳು ಜಿಮೇಲ್ ಬಳಕೆದಾರರಿಗೆ ಗೂಗಲ್ ಬೆಂಬಲ ಏಜೆಂಟ್ ಹೆಸರಿನಲ್ಲಿ ಕರೆ ಮಾಡುತ್ತಾರೆ. ‘ನಿಮ್ಮ ಖಾತೆಹ್ಯಾಕ್ ಆಗಿದೆ, ಇಮೇಲ್ನಲ್ಲಿ ಸ್ವೀಕರಿಸಿದ ಕೋಡ್ ಬಳಸಿಕೊಂಡು ಖಾತೆಯನ್ನು ಮರುಪಡೆಯಿರಿ’ ಎಂದು ತಿಳಿಸುತ್ತಾರೆ. ಹ್ಯಾಕರ್ಗಳು ಕಳುಹಿಸಿರುವ ಇ-ಮೇಲ್ ಮತ್ತು ರಿಕವರಿ ಕೋಡ್ ಕೂಡ ಅಸಲಿ ಎಂಬಂತೆ ಕಾಣಿಸುತ್ತದೆ ಎಂದು ಗೂಗಲ್ ಎಚ್ಚರಿಕೆಯಲ್ಲಿ ತಿಳಿಸಿದೆ.
ಅಂತಹ ಯಾವುದೇ ಇಮೇಲ್ ಅಥವಾ ಕರೆಯನ್ನು ಸ್ವೀಕರಿಸಿದರೆ ನಿರ್ಲಕ್ಷಿಸಿ. ನೀವು ಹ್ಯಾಕರ್ಗಳು ಕಳುಹಿಸಿದ ರೀಸೆಟ್ ಕೋಡ್ ಬಳಸಿಕೊಂಡು ನಿಮ್ಮ ಖಾತೆಯನ್ನು ಮರುಪಡೆಯಲು ಪ್ರಯತ್ನಿಸಿದ್ದರೆ ತಕ್ಷಣ ಜಿಮೇಲ್ ಖಾತೆಯನ್ನು ಲಾಗೌಟ್ ಮಾಡಿ. ಖಾತೆಗೆ ಇನ್ನಷ್ಟು ಭದ್ರತೆ ಮಾಡಲು ಟು ಸ್ಟೆಪ್ ವೆರಿಫಿಕೇಷನ್ ಮೂಲಕ ಮೇಲ್ ಖಾತೆಯನ್ನು ಯಾವಾಗಲೂ ರಕ್ಷಿಸಿ ಎಂದು ಗೂಗಲ್ ಸಲಹೆ ನೀಡಿದೆ.