ಮಂಡ್ಯಡಲ್ಲಿ ಮಾಸಾಂತ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರದ ಆತಿಥ್ಯವೂ ನೀಡಬೇಕು ಎಂದು ಬಾಡೂಟ ಬಳಗ ಆಗ್ರಹಿಸಿ ಪ್ರತಿಭಟನೆ ನಡೆಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಬಾಡೂಟ ಬಳಗ, ಮಂಡ್ಯ ಜಿಲ್ಲೆ ಬಾಡೂಟಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಅತಿಥಿಗಳಿಗೆ ಬಾಡೂಟ ಹಾಕಿಯೇ ಸತ್ಕಾರ ಮಾಡುವುದು. ಆದರೆ ಮಾಂಸಾಹಾರಕ್ಕೆ ಯಾವುದೇ ಅವಕಾಶ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಡಿಸೆಂಬರ್ ೨೦ರಂದ ೨೨ರವರೆಗೆ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರದ ಜೊತೆ ಮಾಂಸಹಾರವೂ ಇರಲಿ. ಕೇವಲ ಸಸ್ಯಹಾರಿಗಳು ಮಾತ್ರ ಸಾಹಿತ್ಯ ಸಮ್ಮೇಳನಕ್ಕೆ ಬರುವುದಿಲ್ಲ. ಅತಿಥಿ ಸತ್ಕಾರ ಮಾಡುವಾಗ ಬಾಡೂಟದ ವ್ಯವಸ್ಥೆಯೂ ಆಗಬೇಕು ಎಂದು ಬಾಡೂಟ ಬಳಗ ಆಗ್ರಹಿಸಿದೆ.