Menu

ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ನೀಡಿ: ಹೆಚ್​.ವಿಶ್ವನಾಥ್​ ಒತ್ತಾಯ

h vishwanath

ಮೈಸೂರು: ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗ ಅಲ್ಲ. ಡಿ.ಕೆ.ಶಿವಕುಮಾರ್​ ಅವರು ಮೂಲ ಕಾಂಗ್ರೆಸ್​.  ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್​ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​.ವಿಶ್ವನಾಥ್​ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, “ಡಿಕೆಶಿ ನಿಜವಾಗಿಯೂ ಕಾಂಗ್ರೆಸ್‌ ಕಟ್ಟಿದವರು. ಜೊತೆಗೆ ಮೂಲ ಕಾಂಗ್ರೆಸ್ಸಿಗರು. ಆದರೆ ಸಿದ್ದರಾಮಯ್ಯ ಎಲ್ಲಿಂದಲೋ ಬಂದು ಕಾಂಗ್ರೆಸ್‌ ಸೇರಿಕೊಂಡವರು. ನಿಜವಾಗಿ ಮುಖ್ಯಮಂತ್ರಿ ಸ್ಥಾನ ಡಿಕೆಶಿಗೆ ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ಸಿಎಂ ಪಟ್ಟ ಯಾರ ಆಸ್ತಿಯೂ ಅಲ್ಲ” ಎಂದರು.

ಮುಡಾ ವಿಚಾರದಲ್ಲಿ ಜನರಿಗೆ ಸಿಎಂ ಸಿದ್ದರಾಮಯ್ಯ ಯಾರು ಎಂಬುದು ಅರ್ಥವಾಗಿದೆ. ಸಿದ್ದರಾಮಯ್ಯ ತಮ್ಮ ಮನೆಯನ್ನೇ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಕಚೇರಿ ಮಾಡಿಬಿಟ್ಟರು. ಮೈಸೂರಿನಲ್ಲಿ ನಿವೇಶನಕ್ಕಾಗಿ ಮುಡಾಗೆ ಅರ್ಜಿ ಹಾಕಿ ೮೩ ಸಾವಿರ ಜನ ಕಾಯುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಅವರ ಹೆಂಡತಿ ೧೪ ಸೈಟ್‌ ಪಡೆದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಯಾರು ಎಂಬುದು ಜನರಿಗೆ ಗೊತ್ತಾಗಿದೆ” ಎಂದು ಟೀಕಿಸಿದರು.

ರಾಜ್ಯದಲ್ಲಿ ಸರ್ಕಾರವೇ ಇಲ್ಲ: “ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಚೆನ್ನಾಗಿ ಆಡಳಿತ ನಡೆಸಿದ್ದರು. ಆದರೆ ಎರಡನೇ ಬಾರಿ ಅವರ ಆಡಳಿತ ನೋಡಿದರೆ, ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಅನ್ನಿಸುತ್ತದೆ. ಒಬ್ಬ ಮಂತ್ರಿ ಸದನದಲ್ಲಿ ಹನಿಟ್ರ‍್ಯಾಪ್‌ ಬಗ್ಗೆ ಮಾತನಾಡುತ್ತಾರೆ ಎಂದರೆ, ನೀವೇ ಊಹಿಸಿ” ಎಂದರು.

ಗ್ಯಾರೆಂಟಿಗಳು ಅನಾವಶ್ಯಕವಾಗಿ ರಾಜ್ಯದ ರ‍್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಹಿಂದಿನ ರ‍್ಕಾರಗಳು ಫ್ರೀ ನೀಡಿವೆ. ಆದರೆ ಸಬ್ಸಿಡಿಯಲ್ಲಿ ನೀಡಿದೆ. ೭೬ ಸಾವಿರ ಕೋಟಿ ರೂ. ಹಣವನ್ನು ಉಚಿತ ಗ್ಯಾರಂಟಿಗಾಗಿ ರ‍್ಚು ಮಾಡಿದೆ ಎಂದು ಸರ್ಕಾರ ಹೇಳುತ್ತಿದೆ. ನಾಲ್ಕು- ಐದು ಇರಿಗೇಷನ್‌ ಪ್ರಾಬ್ಲಮ್‌ ಮುಗಿಯುತ್ತಿತ್ತು ಈ ಹಣದಲ್ಲಿ ವಿವೇಚನೆಯಿಲ್ಲದೆ ಸರ್ಕಾರ ತೆರಿಗೆದಾರರ ಹಣವನ್ನು ದುಂದುವೆಚ್ಚ ಮಾಡುತ್ತಿದೆ. ಜನರ ಶ್ರಮದ ಹಣ ಸರಿಯಾಗಿ ಚರ್ಚೆ ಆಗುತ್ತಿಲ್ಲ. ವಿರೋಧ ಪಕ್ಷದ ಬಿಜೆಪಿಯವರು ಸರಿಯಾಗಿ ವಿರೋಧ ಪಕ್ಷದ ಕೆಲಸ ಮಾಡುತ್ತಿಲ್ಲ. ಒಟ್ಟಿನಲ್ಲಿ ರಾಜ್ಯದ ಜನ ಹಾಳಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Posts

Leave a Reply

Your email address will not be published. Required fields are marked *