ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗಲು ಒಮ್ಮೆ ಅವಕಾಶ ನೀಡಲಿ, ನಮ್ಮ ಜನಾಂಗಕ್ಕೆ ಅನ್ಯಾಯವಾಗಲು ಬಿಡೋದಿಲ್ಲ. ನಮ್ಮ ಕೈಗೆ ಪೆನ್ನು ಪೇಪರ್ ಕೊಡಿ ಅಂತ ರಾಜ್ಯದ ಜನತೆಗೆ ಮನವಿ ಮಾಡಿದ್ರು. ಅವರ ಮಾತಿಗೆ ನಂಬಿಕೆ ಇಟ್ಟು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಕೊಡೋದಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಗಾಂಧಿ ,ಸೋನಿಯಾ ಗಾಂಧಿ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಕೆಶಿಗೆ ಅವಕಾಶ ಕೊಡ್ಲಿ ಎಂದು ಒಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಎಲ್. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯಾಯವಾದರೆ ಕೈ ಕಟ್ಟಿ ಕೂರದೆ KPCC ಅಧ್ಯಕ್ಷರಾಗಿ ದುಡಿದಿದ್ದಾರೆ. 2023 ರ ಚುನಾವಣೆಯಲ್ಲಿ ಅವ್ರ ಶ್ರಮದಿಂದಲೇ ಹೆಚ್ಚು ಸ್ಥಾನ ಗೆದ್ದಿದೆ. ಒಕ್ಕಲಿಗ ಪ್ರಾಬಲ್ಯವಿರೋ ಹಳೆ ಮೈಸೂರು ಭಾಗದಲ್ಲಿ ಡಿಕೆಶಿ ಸಿಎಂ ಆಗ್ತಾರೆ ಅನ್ನೋ ಆಸೆ ಇತ್ತು.ಅದೇ ಉದ್ದೇಶದಿಂದಲೇ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸದ ಹೆಚ್ಚು ಸ್ಥಾನ ಗೆದ್ದಿದೆ. ನ್ಯಾಯುತವಾಗಿ ಮೊದಲನೇ ಅವಧಿಯಲ್ಲೇ ಡಿಕೆ ಶಿವಕುಮಾರ್ ಸಿಎಂ ಆಗಬೇಕಿತ್ತು.ಎರಡನೇ ಅವಧಿಗೆ ಸಿಎಂ ಆಗ್ತಾರೆ ಅನ್ನೋ ತಾಳ್ಮೆ ಯಿಂದ ಸುಮ್ಮನಿದ್ದೆವು .ಈಗ ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ನಾವು ಇನ್ನೊಬ್ಬರ ಅವಕಾಶ ಕೇಳುತ್ತಿಲ್ಲ. ನಮ್ಮಜನಾಂಗಕ್ಕೆ ನ್ಯಾಯ ಸಿಗಬೇಕು ಅನ್ನೋದು ನಮ್ಮಬೇಡಿಕೆ. ನಮ್ಮ ಸಮುದಾಯಕ್ಕೆ ಅನ್ಯಾಯ ವಾದರೆ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಗೆಲುವಿಗೆ ನಮ್ಮ ಒಕ್ಕಲಿಗರ ಸಂಘ ಸಾಕಷ್ಟು ಶಮಿಸಿದೆ. ಒಪ್ಪಂದದ ಮೇರೆಗೆ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ರು. ಆಗ ನಾವು ಕೂಡ ಒಪ್ಪಿಕೊಂಡಿದ್ವಿ, ನಮ್ಮ ಡಿಕೆ ಅವ್ರು ಪಕ್ಷವನ್ನ ಅಧಿಕಾರಕ್ಕೆ ತಂದವರು. ನಮ್ಮ ಸಮುದಾಯದ ನಾಯಕ ಸಿಎಂ ಆಗಬೇಕು. ಸಿಎಂ ಸಿದ್ದರಾಮಯ್ಯ ಕೂಡ ಮಾತು ಕೊಟ್ಟಿದ್ರು, ಈಗ ಡಿಕೆ ಶಿವುಕುಮಾರ್ ಅವರಿಗೆ ಸಿಎಂ ಸ್ಥಾನ ಕೊಡಬೇಕು. ನಾವು ಕೂಡ ಒತ್ತಡ ಹಾಕುತ್ತೇವೆ, ಡಿಕೆ ನೆ ಸಿಎಂ ಆಗಬೇಕು, ಡಿಕೆಶಿ ಪಕ್ಷ ಕೊಟ್ಟ ಎಲ್ಲಾ ಟಾಸ್ಕ್ ಗಳನ್ನೂ ನಿಭಾಯಿಸಿ ದ್ದಾರೆ ಎಂದು ಕೆಂಚಪ್ಪಗೌಡ ಹೇಳಿಕೆ ನೀಡಿದ್ದಾರೆ.
2023 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಹಗಲಿರುಳು ಡಿಕೆಶಿ ಶ್ರಮಿಸಿದ್ದಾರೆ. ಅವರಿಗೆ ಅನ್ಯಾಯವಾದ್ರೆ ಇಡೀ ಒಕ್ಕಲಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ. ಈ ಹಿಂದೆ ಮಾತು ತಪ್ಪಿದ್ದಕ್ಕೆ ಏನು ಆಯ್ತು ಅನ್ನೋದು ಗೊತ್ತಿದೆ. ಸಿದ್ದರಾಮಯ್ಯ ಉತ್ತಮ ಹೃದಯ ಹೊಂದಿದವರು. ಮಾತು ತಪ್ಪದೆ ಸಿದ್ದರಾಮಯ್ಯ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವ್ರಿವೆ ನಮ್ಮ ಮನವಿ ಇಷ್ಟೇ ಎಂದು ಹೇಳಿದ್ದಾರೆ.
ಎರುವಳ್ಳಿ ರಮೇಶ್ ಮಾತನಾಡಿ, ಡಿಕೆ ಶಿವಕುಮಾರ್ ನಮ್ಮ ಸಮುದಾಯದ ನಾಯಕರು, ಕಾಂಗ್ರೆಸ್ ಅಧಿಕಾರಕ್ಕೆಬರಬೇಕು ಎಂದು ಸಮುದಾಯಕ್ಕೆ ಕರೆ ಕೊಟ್ಟಿದ್ದೆವು. ಚುನಾವಣೆ ಸಂಧರ್ಭದಲ್ಲಿ ಅವರು ಪಕ್ಷವನ್ನ ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅವರ ಶ್ರಮಕ್ಕೆ ನಮ್ಮ ಸಮುದಾಯ ಮತಹಾಕುವ ಮೂಲಕ ಬೆಂಬಲವಾಗಿ ನಿಂತಿದ್ದೆವು. ಈಗ ಅವರಿಗೆ ಸಿಎಂ ಸ್ಥಾನ ನೀಡ್ಬೇಕು ಅನ್ನೋದು ಸಮುದಾಯದ ಬೇಡಿಕೆ. KPCC ಅಧ್ಯಕ್ಷರು ಯಾರು ಇರ್ತಾರೋ ಅವ್ರೇ ಸಿಎಂ ಆಗೋದು ಪದ್ದತಿ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರು. ಸಿದ್ದರಾಮಯ್ಯ ಸಿಎಂ ಆಗೋಕೆ ನಮ್ಮ ಸಮುದಾಯವೂ ಬೆಂಬಲ ನೀಡಿತ್ತು. ಡಿಕೆ ಗೆ ಸಿಎಂ ಸ್ಥಾನ ಕೊಡದಿದ್ದರೆ ನಮ್ಮ ಹೊರಟ ಜೋರಾಗಿ ಇರುತ್ತೆ. ಸಿಎಂ ಯಾವತ್ತಿಗೂ ಕೂಡ ಮಾತಿಗೆ ತಪ್ಪದ ಮನುಷ್ಯ, ಕೊಟ್ಟ ಮಾತನ್ನು ಸಿದ್ದರಾಮಯ್ಯ ಅವ್ರು ನಡೆಸಿ ಕೊಡತಾರೆ ಅನ್ನುವ ನಂಬಿಕೆ ಇದೆ. ಡಿಕೆ ಅವ್ರುಗೆ ಸಿಎಂ ಸ್ಥಾನ ಸಿಗುವುದು ಖಚಿತ ಎಂದು ಹೇಳಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ಪಕ್ಷ ನಿಷ್ಟೆ ತೋರಿದ ಡಿಕೆಗೆ ಸಿಎಂ ಪಟ್ಟ ಕೊಡಬೇಕು. ಹೈಕಮಾಂಡ್ ಗೆ ಕೇಳಿಕೊಳ್ಳೋದು ಇಷ್ಟೇ. ಬೇರೆ ರಾಜ್ಯದ ಚುನಾವಣೆಯಾಗಿರಲಿ, ಇಡಿ ರೇಡ್ ಆಗಿರಲಿ ಯಾವುದನ್ನು ಮನಸಿಗೆ ಹಾಕಿಕೊಳ್ಳದೇ ಪಕ್ಷಕ್ಕಾಗಿ ಕೆಲ್ಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿ ಇರಬೇಕಾದ್ರೇ ಡಿಕೆಗೆ ಸಿಎಂ ಕೊಡಬೇಕು. ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆದುಕೊಳ್ಳಬೇಕು. ಪಕ್ಷಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ, ಇಷ್ಟು ಕಷ್ಟಕ್ಕೆ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.


