ಬೆಂಗಳೂರಿನ ಉಲ್ಲಾಳ ಮುಖ್ಯರಸ್ತೆಯ ಜ್ಞಾನಜ್ಯೋತಿನಗರದ ರಸ್ತೆ ನಡುವೆಯೇ ಯುವಕನೊಬ್ಬ ಗೆಳತಿಯ ಬಟ್ಟೆ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದು, ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
2024ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ನವೀನ್ ಎಂಬಾತ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಇತ್ತು. ಆಗಾಗ ಆಕೆ ಮತ್ತು ನವೀನ್ ನಾಗರಭಾವಿ ಬಳಿ ಭೇಟಿ ಆಗುತ್ತಿದ್ದರು. ಕಳೆದ ತಿಂಗಳಿನಿಂದ ತನ್ನನ್ನು ಪ್ರೀತಿಸುವಂತೆ ಯುವತಿಗೆ ನವೀನ್ ಪೀಡಿಸುತ್ತಿದ್ದನು ಎನ್ನಲಾಗಿದೆ.
ಡಿಸೆಂಬರ್ 22ರಂದು ಮಧ್ಯಾಹ್ನ ಕಾರ್‌ನಲ್ಲಿ ಬಂದ ನವೀನ್, ಗೆಳತಿಯ ಬಟ್ಟೆ ಹಿಡಿದು ಎಳೆದಾಡಿದ್ದಾನೆ. ಕಿರುಚಾಡಿಕೊಂಡರೂ ಬಿಡದೇ ನಡುರಸ್ತೆಯಲ್ಲಿಯೇ ಎಳೆದಾಡಿ ಕಿರುಕುಳ ನೀಡಿದ ಬಳಿಕ ಪರಾರಿಯಾಗಿದ್ದಾನೆ.
ಈ ವೇಳೆ ಯುವತಿ ಜೊತೆಯಲ್ಲಿ ಆಕೆಯ ಗೆಳತಿ ಕೂಡ ಇದ್ದಳು. ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ದೂರು ದಾಖಲಿದ್ದಾಳೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನವೀನ್‌ನನ್ನು ಬಂಧಿಸಿದ್ದಾರೆ.


