ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಬಸ್ ಬೆಳಗ್ಗೆ ಬೆಂಗಳೂರಿನ ಬಸವೇಶ್ವರ ನಗರಕ್ಕೆ ತಲುಪಿದಾಗ ಬಾಲಕಿಯ ತಾಯಿ ಮತ್ತು ಸೋದರ ಚಾಲಕ, ನಿರ್ವಾಹಕರನ್ನು ಕೆಳಗಿಸಿ ಬಟ್ಟೆ ಬಿಚ್ಚಿಸಿ ಥಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವಿಧಾನ ಸೌಧ ಠಾಣೆಯ ಪೊಲೀಸರು ತಡೆದು ಆರೋಪಿಗಳಾದ ಬಸ್ ಕಂಡಕ್ಟರ್ ಆರೀಫ್ ಮತ್ತು ಡ್ರೈವರ್‌ನನ್ನು ವಶಕ್ಕೆ ಪಡೆದಿದ್ದಾರೆ. ಸ್ಲೀಪರ್ ಬಸ್ಸಿನಲ್ಲಿ 15 ವರ್ಷದ ಬಾಲಕಿ ಹೊರಟಿದ್ದು, ರಾತ್ರಿ ಮೊಬೈಲಿನ ಚಾರ್ಜ್ ಖಾಲಿಯಾಗಿದ್ದರಿಂದ ಚಾಲಕನ ಬಳಿ ಚಾರ್ಜ್ ಹಾಕುವಂತೆ ಹೇಳಿದ್ದಳು. ಸ್ವಲ್ಪ ಹೊತ್ತಾದ ನಂತರ ಮೊಬೈಲ್ ಕೊಡುವಂತೆ ಕೇಳಿದಾಗ ಚಾಲಕ ಮುತ್ತು ಕೊಟ್ಟರೆ ಮಾತ್ರ ನೀಡುವುದಾಗಿ ಹೇಳಿದ್ದಾನೆ.
ಕಂಡಕ್ಟರ್ ಮತ್ತು ಡ್ರೈವರ್ ಬಾಲಕಿ ಮಲಗಿದ್ದಾಗ ಸೀಟ್ ಬಳಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈತನ ಕಿರುಕುಳ ತಾಳಲಾರದೆ ಬಾಲಕಿ ಕರೆ ಮಾಡಿ ತಾಯಿಗೆ ವಿಷಯ ತಿಳಿಸಿದ್ದಾಳೆ. ಬೆಳಗ್ಗೆ ಬಸ್ಸು ಬಸವೇಶ್ವರನಗರಕ್ಕೆಬರುತ್ತಿದ್ದಂತೆ ಆರೀಫ್‌ನನ್ನು ಕೆಳಗೆ ಇಳಿಸಿ ತಾಯಿ ಮತ್ತು ಆಕೆಯ ಸಹೋದರ ಈತನ ಬಟ್ಟೆಯನ್ನು ಬಿಚ್ಚಿ ಹೊಡೆದಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್‌ನಲ್ಲಿರುವ ನನ್ನ ಮಗಳ ಮನೆಗೆ ಇವಳು ಹೋಗಿದ್ದಳು. ರಾತ್ರಿ ಬಸ್ಸಿನಲ್ಲಿ ಕೊಡಬಾರದ ಕಿರುಕುಳ ಕೊಟ್ಟಿದ್ದು ಹೇಳಲು ಅಸಹ್ಯವಾಗುತ್ತಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೋ ಗೊತ್ತಿಲ್ಲ. ನಾನು ಈತನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕಂಡಕ್ಟರ್ ಆರೀಫ್ ಮತ್ತು ಡ್ರೈವರ್‌ನನ್ನು ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.