ಯಡ್ರಾಮಿ ಪಟ್ಟಣದಲ್ಲಿ ತಡ ರಾತ್ರಿ ಗೋಡೆ ಕುಸಿದು ಸಾನಿಯಾ (17) ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಮಹಿಬೂಬ, ನಿಶಾದ, ಆಯಿಷಾ, ರಮಜಾನಬಿ ಗಂಭೀರ ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಡ್ರಾಮಿ ಪಟ್ಟಣದ ನಿವಾಸಿ ಸೈಪನಸಾಬ ತಾಂಬೋಳಿ ಹಾಗೂ ಪತ್ನಿ ಸಿಂದಗಿಗೆ ಹೋಗಿದ್ದರು, ಮನೆಯಲ್ಲಿ 5 ಮಕ್ಕಳು ನಿದ್ದೆಯಲ್ಲಿದ್ದಾಗ ಮಧ್ಯರಾತ್ರಿ ಗೋಡೆ ಕುಸಿದ್ದು, ಬಾಲಕಿ ಮೇಲೆ ಗೋಡೆ ಬಿದಿದೆ.
ಗೋಡೆ ಕುಸಿತ ಸದ್ದಿಗೆ ಅಕ್ಕ-ಪಕ್ಕದ ನಿವಾಸಿಗಳು ದೌಡಾಯಿಸಿ ಬಂದು ನೋಡುವಷ್ಟರಲ್ಲಿ 4 ಮಕ್ಕಳು ಗಂಭೀರವಾಗಿ ಗಾಯಗೊಂಡು ಅಳುತ್ತಿರುವಾಗ ಕೇಳಿಸಿಕೊಂಡ ಸ್ಥಳೀಯರು ಬಂದು ಕುಸಿದ ಗೋಡೆಯ ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ ಹುಡುಕಾಡಿದ್ದಾರೆ. ಬಾಲಕಿ ಮೇಲೆ ಸಂಪೂರ್ಣ ಗೋಡೆ ಬಿದ್ದಿದರಿಂದ ಬಾಲಕಿ ಬದುಕುಳಿಯಲಿಲ್ಲ, ಗಾಯಗೊಂಡಿದ್ದ ನಾಲ್ವರನ್ನು ರಕ್ಷಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.