ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಹಂಚಿಪುರದಲ್ಲಿ ವಾಷಿಂಗ್ ಮಿಷನ್ ಆನ್ ಮಾಡುವ ವೇಳೆ ವೈರ್ ನಿಂದ ಶಾಕ್ ತಗುಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಲೋಕೇಶ್ ಹಾಗೂ ಪ್ರಿಯದರ್ಶಿನಿ ದಂಪತಿಯ ಪುತ್ರಿ 13 ವರ್ಷದ ಪ್ರಿಯದರ್ಶಿನಿ ಮೃತ ಬಾಲಕಿ. ಬಟ್ಟೆ ಒಗೆಯಲು ವಾಷಿಂಗ್ ಮಿಷನ್ ಆನ್ ಮಾಡುವಾಗ ವಿದ್ಯುತ್ ಆಘಾತಗೊಂಡು ಸ್ಥಳದಲ್ಲೇ ಅಸು ನೀಗಿದ್ದಾಳೆ.
ಬಾಲಕಿಯ ಕುಟುಂಬಸ್ಥರು ಆಕೆಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಈ ದುಃಖದ ಸಂದರ್ಭದಲ್ಲೂ ಮಾನವೀಯತೆ ಮೆರೆದಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.