ಬೆಂಗಳೂರು ಕಲಾಸಿಪಾಳ್ಯ ಹೋಟೆಲ್ ಮಯೂರ ಪಕ್ಕದ ರಸ್ತೆಯ ಮನೆಯಲ್ಲಿ ಬಾಲಕಿಯೊಬ್ಬಳು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶರ್ಮಿಳಾ (16) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಬಾಲಕಿಯ ಪೋಷಕರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ಕಲಾಸಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಕಜ್ಜಾಯ ಕೊಡುವುದಾಗಿ ಕರೆಸಿ ವೃದ್ಧೆಯ ಕೊಲೆಗೈದು ಚಿನ್ನ ದರೋಡೆ
ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಬಳಿ ಕಜ್ಜಾಯ ಕೊಡುವುದಾಗಿ ಮನೆಗೆ ಕರೆದು ವೃದ್ಧೆಯನ್ನು ಕೊಲೆ ಮಾಡಿ ಮಹಿಳೆಯ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.
ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ ಎಂದು ಅಜ್ಜಿಯೊಬ್ಬರನ್ನು ಕರೆದ ಮಹಿಳೆ, ಅಜ್ಜಿ ಬಳಿ ಇರುವ ಚಿನ್ನಕ್ಕಾಗಿ ಕೊಂದು ಕೆರೆಗೆ ಎಸೆದಿದ್ದಾಳೆ. 68 ವರ್ಷದ ಭದ್ರಮ್ಮ ಕೊಲೆಯಾದವರು. ದೀಪ ಕೊಲೆ ಮಾಡಿದಾಕೆಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.


