Menu

ಗಿಲ್ ಶತಕ: 5 ವಿಕೆಟ್ 518 ರನ್ ಗೆ ಭಾರತ ಮೊದಲ ಇನಿಂಗ್ಸ್ ಡಿಕ್ಲೇರ್

ಆರಂಭಿಕ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕಗಳ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗೆ 518 ರನ್ ಗೆ ಡಿಕ್ಲೇರ್ ಮಾಡಿಕೊಂಡಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 2 ವಿಕೆಟ್ ಗೆ 318 ರನ್ ಗಳಿಸಿದ್ದ ಭಾರತ ತಂಡ ಚಹಾ ವಿರಾಮಕ್ಕೂ ಮುನ್ನವೇ 200 ರನ್ ಹೆಚ್ಚು ಪೇರಿಸಿ 518 ರನ್ ಗೆ ಡಿಕ್ಲೇರ್ ಮಾಡಿಕೊಂಡಿದೆ.

ನಿನ್ನೆ 173 ರನ್ ಗಳಿಸಿದ್ದ ಜೈಸ್ವಾಲ್ ನಿನ್ನೆಯ ಮೊತ್ತಕ್ಕೆ 2 ರನ್ ಸೇರಿಸಿ ಔಟಾಗುವ ಮೂಲಕ ದ್ವಿಶತಕದ ಅವಕಾಶದಿಂದ ತಪ್ಪಿಸಿಕೊಂಡರು. ಮತ್ತೊಂದೆಡೆ ನಿನ್ನೆ 20- ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಶುಭಮನ್ ಗಿಲ್ ಶತಕ ಪೂರೈಸಿ ಅಜೇಯರಾಗಿ ಉಳಿದರು.

ಜೈಸ್ವಾಲ್ 258 ಎಸೆತಗಳಲ್ಲಿ 22 ಬೌಂಡರಿ ಸೇರಿದ 175 ರನ್ ಬಾರಿಸಿ ಔಟಾದರೆ, ಗಿಲ್ 196 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 129 ರನ್ ಬಾರಿಸಿ ಔಟಾಗದೇ ಉಳಿದರು.

ಗಿಲ್ ಗೆ ಉತ್ತಮ ಬೆಂಬಲ ನೀಡಿದ ನಿತೀಶ್ ಕುಮಾರ್ ರೆಡ್ಡಿ (43) ಮತ್ತು ಧ್ರುವ ಜುರೆಲ್ (ಅಜೇಯ 44) ಅರ್ಧಶತಕ ಪೂರೈಸದೇ ನಿರಾಸೆ ಮೂಡಿಸಿದರು.

ವೆಸ್ಟ್ ಇಂಡೀಸ್ ಪರ ಜೊಮಾಲ್ ವಾರಿಕನ್ 3 ವಿಕೆಟ್ ಪಡೆದು ಮಿಂಚಿದರೆ, ರೊಸ್ಟನ್ ಚೇಸ್ 1 ವಿಕೆಟ್ ಗಳಿಸಿದರು.

Related Posts

Leave a Reply

Your email address will not be published. Required fields are marked *