ಬೆಂಗಳೂರಿನಲ್ಲಿ ಅನಧಿಕೃತವಾಗಿ ತಿಂಗಳುಗಟ್ಟಲೇ ಒಂದೇ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹರಾಜಿಗಿಡಲಿದೆ.
ಎಷ್ಟೇ ಬಾರಿ ವಾಹನ ತೆರವು ಮಾಡಿ ಅಂದ್ರೂ ವಾಹನ ಮಾಲೀಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿರುವುದರಿಂದ ಟ್ರಾಫಿಕ್ ಮತ್ತಷ್ಟು ಹೆಚ್ಚುತ್ತಿದೆ. ಹೀಗಾಗಿ ಸಂಚಾರ ಪೊಲೀಸ್ ಇಲಾಖೆ ಜೊತೆ ಟೋಯಿಂಗ್ ಮಾಡಿ ವಾಹನಗಳನ್ನು ಹರಾಜು ಹಾಕಲು ಜಿಬಿಎ ಎಲ್ಲ ಸಿದ್ಧತೆ ನಡೆಸುತ್ತಿದೆ.
ಆಯಾ ಪಾಲಿಕೆಯಲ್ಲಿ ನಿಂತ ವಾಹನಗಳನ್ನು ಪಾಲಿಕೆ ಅಧಿಕಾರಿಗಳು ಹರಾಜು ಮಾಡಲಿದ್ದಾರೆ. ಈ ಮೂಲಕ ಅನಧಿಕೃತವಾಗಿ ತಿಂಗಳುಗಟ್ಟಲೇ ಒಂದೇ ಜಾಗದಲ್ಲಿ ನಿಲ್ಲಿಸಿರುವ ವಾಹನಗಳ ತೊಂದರೆಯನ್ನು ಕೊನೆಗಾಣಿಸಲು ದ ಹರಾಜಿನ ಅಸ್ತ್ರ ಹೂಡಲು ಜಿಬಿಎ ಅಧಿಕಾರಿಗಳು ಮುಂದಾಗಿದ್ದಾರೆ. ಇಂಥ ವಾಹನಗಳ ರಹಾಜು ಮೂಲಕ ಬಂದ ಹಣ ಜಿಬಿಎ ಖಜಾನೆ ಸೇರಲಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ಇತ್ತೀಚೆಗೆ ಕಾರು ಬಾಂಬ್ ಸ್ಫೋಟಗೊಂಡು ಹಲವರು ಮೃತಪಟ್ಟು ಗಾಯಗೊಂಡಿದ್ದರು. ಕಾರಿನಲ್ಲಿದ್ದ ಸ್ಫೋಟಕ ಪರಿಶೀಲನೆ ವೇಳೆ ಪೊಲೀಸ್ ಠಾಣೆಯಲ್ಲಿ ಹಲವರು ಸ್ಫೋಟಕ್ಕೆ ಬಲಿಯಾಗಿದ್ದರು. ದೆಹಲಿ ಪ್ರಕರಣದ ಇನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ.


