ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಏಪ್ರಿಲ್ ಒಂದರಿಂದ ಕಠಿಣ ನಿಯಮಗಳು ಜಾರಿಗೊಳ್ಳುತ್ತಿವೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅಡಿ ನೈರ್ಮಲ್ಯ ಕಾಪಾಡಲು ಕಠಿಣ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ. ನಿಯಮ ಉಲ್ಲಂಘಿಸುವವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ದೇಶಾದ್ಯಂತ ಏಕರೂಪ ಘನತ್ಯಾಜ್ಯ ನಿರ್ವಹಣೆ ನಿಯಮಗಳು ಬರಲಿದ್ದು, ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮಗಳು ಜಾರಿಯಾಗಲಿದೆ.
ಮನೆಯಲ್ಲೇ ಕಸ ವಿಂಗಡಣೆ ಕಡ್ಡಾಯವಾಗಲಿದ್ದು, ಕಸವನ್ನು ಹಸಿ, ಒಣ, ಸ್ಥಳೀಯ ನೈರ್ಮಲ್ಯ ಮತ್ತು ವಿಶೇಷ ತ್ಯಾಜ್ಯ ಎಂದು ವಿಂಗಡಿಸಿ ನೀಡಬೇಕಿದೆ. ಇದಕ್ಕೆ ತಪ್ಪಿದರೆ ಮೊದಲ ಬಾರಿ 500 ರೂ. ದಂಡ, ಎರಡನೇ ಬಾರಿ ಸಾವಿರ ರೂ. ದಂಡ, ಪದೇ ಪದೆ ನಿಯಮ ಉಲ್ಲಂಘಿಸಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರನ್ನು ಪತ್ತೆಹಚ್ಚಲು 198 ವಾರ್ಡ್‌ಗಳಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ರಸ್ತೆಯಲ್ಲಿ ಕಸ ಎಸೆದ, ಅದನ್ನು ಅವರ ಮನೆಗೆ ವಾಪಸ್ ನೀಡುವ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಸ ನಿರ್ವಹಣೆಯಲ್ಲಿ ಲೋಪ ಎಸಗುವ, ಸಕಾಲಕ್ಕೆ ಕಸ ಸಂಗ್ರಹಿಸದ ಗುತ್ತಿಗೆದಾರರ ವಿರುದ್ಧವೂ ಕ್ರಮ ಕೈಗೊಂಡು, ಶೇ. 20 ಹಣ ತಡೆಹಿಡಿಯಲಾಗುತ್ತದೆ. ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯಡಿ ಕಸ ವಿಲೇವಾರಿಗೆ ಅಡ್ಡಿಪಡಿಸಿದರೆ ಎಸ್ಮಾ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ದೇಶಾದ್ಯಂತ ಏಕರೂಪ ಘನತ್ಯಾಜ್ಯ ನಿರ್ವಹಣೆ ನಿಯಮಗಳು ಬರಲಿದ್ದು, ನಾಳೆಯಿಂದ ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮಗಳು ಜಾರಿಯಾಗಲಿದೆ. ಇದರ ಅನ್ವಯ ಸರಿಯಾಗಿ ಕಸ ವಿಂಗಡಣೆ ಮಾಡದೇ ಇದ್ದರೆ ಬೆಂಗಳೂರಿಗರಿಗೆ ಜಿಬಿಎ ದಂಡಾಸ್ತ್ರ ಪ್ರಯೋಗ ಮಾಡಲಿವೆ.ಸರಿಯಾಗಿ ಕಸ ವಿಂಗಡಣೆ ಮಾಡದೇ ನಿಯಮ ಉಲ್ಲಂಘಿಸಿದ್ರೆ ಮೊದಲ ಬಾರಿಗೆ 500 ರೂ., ಎರಡನೇ ಬಾರಿ ನಿಯಮ ಉಲ್ಲಂಘಿಸಿದ್ರೆ 1,000 ರೂ ವಿಧಿಸಲಾಗುವುದು. ನಾಲ್ಕು ಮಾದರಿಯಲ್ಲಿ ಕಸ ವಿಂಗಡಣೆ ಮಾಡಿ ಆಟೋಗಳಿಗೆ ಕೊಡಬೇಕು ಎಂದು ತಿಳಿಸಿದೆ.


