Menu

ಹಣಕ್ಕಾಗಿ ಮೈಸೂರು ಉದ್ಯಮಿಯ ಕಿಡ್ನ್ಯಾಪ್‌ ಮಾಡಿದ್ದ ಗ್ಯಾಂಗ್‌ ಅರೆಸ್ಟ್‌

ಮೈಸೂರಿನ ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ಉದ್ಯಮಿಯನ್ನು ಅಪಹರಿಸಿದ್ದ ಗ್ಯಾಂಗ್‌ ಅನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್ ಎಂಬವರನ್ನು ಟಾಟಾ ಸುಮೋದಲ್ಲಿ ಬಂದ ಐದು ಮಂದಿ ಅಪಹರಣ ಮಾಡಿಕೊಂಡು ಹೋಗಿದ್ದರು.

ಲೋಕೇಶ್ ಮೊಬೈಲ್‌ನಿಂದ ಅವರ ಪತ್ನಿಗೆ ಕರೆ ಮಾಡಿ ಆರೋಪಿಗಳು 30 ಲಕ್ಷ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಗಾಬರಿಗೊಂಡ ಲೋಕೇಶ್‌ ಅವರ ಪತ್ನಿ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರಿನಿಂದ 50 ಕಿಮೀ ದೂರದಲ್ಲಿ ಆರೋಪಿಗಳನ್ನು ಬಂಧಿಸಿ, ಅಪಹರಣಗೊಂಡಿದ್ದ ಲೋಕೇಶ್ ಅವರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಲೋಕೇಶ್‌ ಅವರ ಚಲನವಲನ ಗಮನಿಸುತ್ತಿದ್ದ ಮಾಡುತ್ತಿದ್ದ ಆರೋಪಿಗಳು ಹೆರಿಟೇಜ್ ಕ್ಲಬ್‌ಗೆ ಹೋಗಿ ವಾಪಸ್ ಬರುವ ವೇಳೆ ಅಪಹರಿಸಿದ್ದರು.

Related Posts

Leave a Reply

Your email address will not be published. Required fields are marked *