Monday, September 08, 2025
Menu

ಗಣೇಶ ವಿಸರ್ಜನೆ: ಮದ್ದೂರಲ್ಲಿ ಕಲ್ಲು ತೂರಾಟ, ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ

ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ ನಡೆದಿದ್ದು, ಇಂದು ಮದ್ದೂರು ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ.  ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ.

ರಾಮ್ ರಹೀಂ ನಗರ ಉದ್ವಿಗ್ನಗೊಂಡಿದು, ಮುನ್ನೆಚ್ಚರಿಕೆ ಕ್ರಮವಾಗಿ ಮದ್ದೂರು ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿಗೊಳಿಸಿದೆ, ಸ್ಥಳಕ್ಕೆ ಡಿಸಿ ,ಎಸ್ಟಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮದ್ದೂರು ಪಟ್ಟಣದಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಘಟನೆಯಲ್ಲಿ ಎರಡೂ ಕೋಮುಗಳ ಹತ್ತು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪೊಲೀಸ್‌ ಬಂದೋಬಸ್ತ್‌ನಲ್ಲಿ ಮೆರವಣಿಗೆ ಸ್ಥಗಿತಗೊಳಿಸಿ ಗಣೇಶ ವಿಸರ್ಜನೆ ಮಾಡಲಾಯಿತು. ಕಳೆದ ವರ್ಷ ನಾಗಮಂಗಲದಲ್ಲಿ ಇಂಥದ್ದೇ ಘಟನೆ ನಡೆದಿತ್ತು.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ಮುಂದುವರಿಸಿದ್ದು, ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಮಹಾರಾಷ್ಟ್ರ ನಾಡಗೀತೆ ಮೊಳಗಿಸಿ ವಿಕೃತಿ ಮೆರೆದಿದೆ. ಜೈ ಮಹಾರಾಷ್ಟ್ರ ಡಿಜೆ ಗೀತೆಯೊಂದಿಗೆ ಉದ್ಧಟತನ ಪ್ರದರ್ಶನ ಮಾಡಿದೆ.
ಬೆಳಗಾವಿ ನಗರದ ಪಾಟೀಲ್ ಗಲ್ಲಿ ಗಣೇಶ ಮಂಡಳಿ ಮೆರವಣಿಗೆಯಲ್ಲಿ ಈ ಬೆಳವಣಿಗೆ ನಡೆದಿದೆ. ಸ್ಥಳೀಯರೊಬ್ಬರು ವೀಡಿಯೊ ಮಾಡಿ ನಾಡದ್ರೋಹಿ ಕೃತ್ಯ ಬಯಲಿಗೆಳೆದಿದ್ದಾರೆ.

ಪದೇ ಪದೆ ನಾಡದ್ರೋಹಿ ಕೆಲಸ ಮಾಡುತ್ತಿರುವ ಎಂಇಎಸ್ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಿರಂತರ ನಾಡದ್ರೋಹಿ ಕೆಲಸಕ್ಕೆ ಮುಂದಾಗಿದ್ದಾರೆ. ನಾಡದ್ರೋಹಿ ಕೃತ್ಯ ಎಸಗಿದವರ ವಿರುದ್ಧ ಬೆಳಗಾವಿ ಪೊಲೀಸರ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಕನ್ನಡಿಗರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *