ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನ ಮುಠ್ಠಾಳ ವಕ್ತಾರ, ಕೆಪಿಸಿಸಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಚಿಕ್ಕಬಳ್ಳಾಪುರ ಕೂಗುಮಾರಿ ಎಲ್ಲರ ಮೇಲೆ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದೇನೆ. ನನ್ನ ಬಗ್ಗೆ ವೈಯಕ್ತಿಕವಾಗಿ ಅವರು ಮಾತಾಡುವಂತಿಲ್ಲ. ಮಾತಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತೆ ಎಂದು ಹೇಳಿದ್ದಾರೆ.
ಮುಠ್ಠಾಳ ವಕ್ತಾರ ನ ಬಳಿ ನನ್ನ ಬಗ್ಗೆ ಸಾಕ್ಷಿ ಇದ್ದರೆ ನ್ಯಾಯಾಲಯಕ್ಕೆ ಕೊಡಲಿ ಇಲ್ಲ ಮಾಧ್ಯಮಕ್ಕೆ ನೀಡಲಿ. ಸಾಕ್ಷಿ ಯಾಕೆ ಜೇಬಿನಲ್ಲಿ ಇಟ್ಟು ಕೊಂಡು ಓಡಾಡುತ್ತೀರಾ? ಅದರಲ್ಲಿ ನಿಮ್ಮ ಮನೆಯವರು ಏನಾದರೂ ಇದ್ಯಾ, ಜೀವನದಲ್ಲಿ ಒಂದು ಆರೋಪಕ್ಕೂ ಉತ್ತರ ಕೊಡದ ಕಾಂಗ್ರೆಸ್ ವಕ್ತಾರ ಒಬ್ಬ ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ. ಕಾಂಗ್ರೆಸ್ ವಕ್ತಾರ ಪಾಲಿಕೆ ಚುನಾವಣೆಗೆ ನಿಂತರು ಸೋಲುತ್ತಾನೆ ಎಂದು ಕಿಡಿ ಕಾರಿದ್ದಾರೆ.
ಒಕ್ಕಲಿಗರ ಬಗ್ಗೆ ಅವಹೇಳನ ಕಾರಿ ಆಗಿ ಮಾತಾಡಿದ ಕಾಂಗ್ರೆಸ್ ವಕ್ತಾರ ಸೀತಾರಾಮ್ ಬಗ್ಗೆ ಯಾಕೆ ಕಾಂಗ್ರೆಸ್ ಕ್ರಮ ಕೈಗೊಂಡಿಲ್ಲ. ಒಕ್ಕಲಿಗರನ್ನು ಬೈಯಲು ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಇಟ್ಟು ಕೊಂಡಿದ್ದಾರಾ, ಸಿಎಂ ಸಿದ್ದರಾಮಯ್ಯ ನಾಲ್ವಡಿ ಅವರ ನಿಂದನೆಗೆ ಮಗನನ್ನು ಇಟ್ಟು ಕೊಂಡಿದ್ದಾರೆ. ಒಕ್ಕಲಿಗರ ನಿಂದನೆಗೆ ಸೀತಾರಾಮ್ ನನ್ನು ಬೆಳೆಸಿದ್ದಾರೆ ಎಂದು ಟೀಕಿಸಿದ್ದಾರೆ.