Tuesday, February 24, 2026
Menu

ಮಾಜಿ ಐಪಿಎಸ್‌ ಭಾಸ್ಕರ್‌ ರಾವ್‌ ಸೋದರಳಿಯ ನಾಪತ್ತೆ

ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೋದರ ಅಳಿಯ ಅನಿರುದ್ಧ್ ರಮೇಶ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ಸಹಾಯ ಕೋರಿದ್ದಾರೆ.

ಭಾಸ್ಕರ್ ರಾವ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಅನಿರುದ್ಧ್ ದಕ್ಷಿಣ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹನುಮಂತನಗರದಲ್ಲಿ ವಾಸವಿದ್ದರು. 6 ಅಡಿ 2 ಇಂಚು ಎತ್ತರವಿದ್ದು,ಶಾಂತ ಸ್ವಭಾವದ ವ್ಯಕ್ತಿ ಎಂದು ಮಾಹಿತಿ ಶೇರ್‌ ಮಾಡಿದ್ದಾರೆ.

ನನ್ನ ಸೋದರಳಿಯ ಎಲ್ಲಿದ್ದಾನೆಂಬುದು ಇನ್ನೂ ತಿಳಿದಿಲ್ಲ. ಸಾಮಾಜಿಕ ಜಾಲತಾಣ ವ್ಯಾಪ್ತಿ ಬಹಳ ದೊಡ್ಡದಿದ್ದು, ಹೀಗಾಗಿ ಸಹಾಯ ಕೋರಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ. ಅನಿರುದ್ಧ್ ನಾಪತ್ತೆಯಾಗುವ ವೇಳೆ ಖಾತೆಯಿಂದ ರೂ.9,000 ಡ್ರಾ ಆಗಿದೆ. ಆತನ ವಾಹನ, ಕ್ರೆಡಿಟ್ ಕಾರ್ಡ್, ಮೊಬೈಲ್ ತೆಗೆದುಕೊಂಡು ಹೋಗಿಲ್ಲ. ಪತ್ರ ಕೂಡ ಬರೆದಿಲ್ಲ ಎಂದು ಹೇಳಿದ್ದಾರೆ.

ಅನಿರುದ್ಧ್ ಅವರ ಸಹೋದರಿ ಅಪೂರ್ವ ಅವಿನಾಶ್ ಮಾತನಾಡಿ, ಫೆಬ್ರವರಿ 17 ರಂದು ನಾಪತ್ತೆ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಅನಿರುದ್ಧ್ ಜಯನಗರದ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಫೆಬ್ರವರಿ 16 ರಂದು ಸಂಜೆ ಕೆಲಸದ ಸ್ಥಳದಿಂದ ಹೊರಬಂದ ನಂತರ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅನಿರುದ್ಧ್ ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನಿರುದ್ಧ ಕಾಲೇಜು ಬಳಿ ಕಾಣೆಯಾದ ಕಾರಣ ಪ್ರಕರಣವನ್ನು ತಿಲಕ್‌ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *