ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಭಾರತ ತಂಡದ ಮಾಜಿ ವೇಗಿ ಎಸ್.ಶ್ರೀಶಾಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕೇರಳ ಕ್ರಿಕೆಟ್ ಸಂಸ್ಥೆ 3 ವರ್ಷ ನಿಷೇಧ ವಿಧಿಸಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಭಾರತ ತಂಡದಿಂದ ಕೈಬಿಟ್ಟಿರುವ ಬಗ್ಗೆ ಶ್ರೀಶಾಂತ್ ಆಧಾರರಹಿತ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಕೇರಳ ಕ್ರಿಕೆಟ್ ಸಂಸ್ಥೆ ಮಂಡಳಿ ಸಭೆಯಲ್ಲಿ 3 ವರ್ಷ ನಿಷೇಧ ವಿಧಿಸಿ ತೀರ್ಮಾನ ಕೈಗೊಂಡಿದೆ.
ಕೇರಳ ಕ್ರಿಕೆಟ್ ಲೀಗ್ ನಲ್ಲಿ ಕೊಲ್ಲಂ ಏರಿಯಸ್ ತಂಡದ ಸಹ ಮಾಲೀಕ ಕೂಡ ಆಗಿರುವ ಶ್ರೀಶಾಂತ್ ಅಲ್ಲಾಪುಜಾ ರಿಪ್ಪೆಲ್ಸ್ ತಂಡದ ಹಾಗೂ ಆ ತಂಡದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ತಂಡಗಳು ನೀಡಿದ ದೂರಿನ ಅನ್ವಯ ಶ್ರೀಶಾಂತ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
ಭಾರತ ತಂಡದ ಪ್ರಮುಖ ಬೌಲರ್ ಆಗಿದ್ದ ಶ್ರೀಶಾಂತ್ ಸಂಜು ಸ್ಯಾಮ್ಸನ್ ಹಾಗೂ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ವಿರುದ್ಧವೂ ಹೇಳಿಕೆ ನೀಡಿದ್ದಾರೆ. ಸ್ಯಾಮ್ಸನ್ ವಿಶ್ವನಾಥ್ ವಿರುದ್ಧದ ಹೇಳಿಕೆಗಳನ್ನು ಬಗೆಹರಿಸಲಾಗಿದೆ. ಆದರೆ ಸ್ಯಾಮ್ಸನ್ ವಿರುದ್ಧ ನೀಡಿರುವ ಹೇಳಿಕೆ ಮಾನಹಾನಿಕರವಾಗಿದ್ದು, ತಂಡದ ಆಡಳಿತ ಮಂಡಳಿಗೆ ಸೇರ್ಪಡೆಗೊಳಿಸಬೇಕಾದರೆ ವ್ಯಕ್ತಿತ್ವವನ್ನು ಗಮನಿಸಿ ಎಂದು ಕೆಸಿಎ ಫ್ರಾಂಚೈಸಿಗಳಿಗೆ ಎಚ್ಚರಿಕೆ ನೀಡಿದೆ.